ಮಾಸ್ಕೋ ಮೃಗಾಲಯ ವಾಸಿಗಳಿಗೆ ಹಿಮಧಾರೆ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ds
ರಷ್ಯಾದಲ್ಲಿ ಈಗ ಚಳಿಗಾಲದ ಅಂತಿಮ ಭಾಗ. ರಾಜಧಾನಿ ಮಾಸ್ಕೋ ನಗರಿ ಚುಮು ಚುಮು ಚಳಿಯಿಂದ ಗಡಗಡ ನಡುಗುತ್ತಿದೆ. ಜನರು ಈ ಪ್ರತಿಕೂಲ ವಾತಾವರಣಕ್ಕೆ ಹಿಡಿಶಾಪ ಹಾಕುತ್ತಿದ್ದರೆ. ಮಾಸ್ಕೋ ಮೃಗಾಲಯದ ಪ್ರಾಣಿಗಳಿಗೆ ಈ ವಾತಾವರಣ ಆಹ್ಲಾದ ನೀಡುವ ಖುಷಿಯ ಸಂಗತಿ…ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಕಂಡು ಬಂದ ಎರಡು ವೈರುಧ್ಯದ ದೃಶ್ಯಗಳಿವು. ಒಂದೆಡೆ ಈ ನಗರದ ಜನರು ತಮ್ಮ ಕಾರುಗಳನ್ನು ಹಿಮಾವೃತ ರಸ್ತೆಗಳಲ್ಲಿ ಸರ್ಕಸ್ ಮಾಡುತ್ತಾ ಚಾಲನೆಯ ದೃಶ್ಯ… ಮಾಸ್ಕೋದ ಮೃಗಾಲಯದ ಪ್ರಾಣಿಗಳು ಹಿಮದಲ್ಲಿ ಸಂತೋಷದ ಚಿನ್ನಾಟ..

ds-2

ಧ್ರುವ ಕರಡಿಗಳಿಗೆ ಹಿಮವೆಂದರೆ ಪಂಚಪ್ರಾಣ. ಮಂಜಿನ ರಾಶಿಯಲ್ಲಿ ಅವುಗಳ ವಿನೋದಕ್ಕೆ ಪಾರವಿರಲಿಲ್ಲ. ಇನ್ನು ವಾಲರಸ್ ಅಥವಾ ಕಡಲ ಸಿಂಹಗಳಿಗೆ ಹಿಮ ನೀರಿನಲ್ಲಿ ಮುಳುಗುವ ಆಟ. ಪೆಂಗ್ವಿನ್‍ಗಳು ಮೃಗಾಲಯದ ಕೊಠದ ಸುತ್ತ ವಾಲಾಡುತ್ತಾ ನಡೆದಾಡಿದವು. ನೀರು ನಾಯಿಗಳು ಮೃಗಪಾಲಕರೊಂದಿಗೆ ಚೆಂಡಿನಾಟದಲ್ಲಿ ತೊಡಗಿದವು. ಮಾಸ್ಕೋ ಜನರು ಮೈನಸ್ 15 ಡಿಗ್ರಿ ಸೆಲ್ಸಿಯಸ್‍ನ ಈ ಪ್ರತಿಕೂಲ ವಾತಾವರಣಕ್ಕೆ ಹಿಡಿಶಾಪ ಹಾಕುತ್ತಿದ್ದರೆ. ಮೃಗಾಲಯದ ಪ್ರಾಣಿಗಳಿಗೆ ಇದು ಆಹ್ಲಾದ ನೀಡುವ ಖುಷಿಯ ಸಂಗತಿಯಾಗಿತ್ತು. ಹಿಮದಲ್ಲಿ ಪ್ರಾಣಿಗಳ ಚಿನ್ನಾಟ ನೋಡಿ ಪ್ರೇಕ್ಷಕರೂ ಸಂಭ್ರಮಪಟ್ಟರು. ಹಿಮ ಬೆಕ್ಕು ಕೂಡ ಸಾರ್ವನಿಕರಿಗೆ ದರ್ಶನ ಕರುಣಿಸಿತು.

Facebook Comments

Sri Raghav

Admin