ಪಿಸ್ತೂಲು ಇಟ್ಟುಕೊಂಡು ಅಮಿತ್ ಷಾ ಪತ್ರಿಕಾಗೋಷ್ಠಿಗೆ ಬಂದಿದ್ದ ವ್ಯಕ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01

ಕಲಬುರಗಿ,ಫೆ.26- ಕಲಬುರಗಿಯಲ್ಲಿ ಅಮಿತ್ ಷಾ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಹೊರಗೆ ವ್ಯಕ್ತಿಯೊಬ್ಬ ಪಿಸ್ತೂಲು ಇಟ್ಟುಕೊಂಡಿರುವುದು ಪತ್ತೆಯಾಗಿ ಕೆಲ ಕಾಲ ಪೊಲೀಸರು ಹಾಗೂ ಸ್ಥಳೀಯರು ಆತಂಕಗೊಂಡ ಘಟನೆಯೂ ಕೂಡ ನಡೆಯಿತು. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆ ವ್ಯಕ್ತಿ ಹೊಂದಿದ್ದ ಪಿಸ್ತೂಲಿಗೆ ಲೈಸೆನ್ಸ್ ಇರುವುದು ತಿಳಿದು ನಿರಾಳರಾದರು. ಎಸ್ಪಿ ಕೂಡ ಮಾಧ್ಯಮದವರಿಗೆ ಮಾಹಿತಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಲಿಸಿದರು.

Facebook Comments

Sri Raghav

Admin