ಟಿಎಂಸಿಗೆ ಬೈಚುಂಗ್ ಭುಟಿಯಾ ಗುಡ್‍ಬೈ

ಈ ಸುದ್ದಿಯನ್ನು ಶೇರ್ ಮಾಡಿ

Bhatia--01

ಕೋಲ್ಕತಾ, ಫೆ.26- ಭಾರತದ ಫುಟ್‍ಬಾಲ್ ದಂತಕಥೆ ಬೈಚುಂಗ್ ಭುಟಿಯಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಗುಡ್ ಬೈ ಹೇಳಿದ್ದಾರೆ. ಇದರಿಂದಾಗಿ ಟಿಎಂಸಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಭಾರತ ಫುಟ್ಬಾಲ್ ತಂಡದ ಅಕ್ರಮಣಕಾರಿ ಆಟಗಾರರಾಗಿದ್ದ ಭುಟಿಯಾ ಟ್ವಿಟರ್ ಮೂಲಕ ರಾಜಕೀಯದಿಂದ ಹಿಂದಕ್ಕೆ ಸರಿಯುವ ನಿರ್ಧಾರ ಕೈಗೊಂಡಿರುವುದಾಗಿ ಘೋಷಿಸಿದ್ದಾರೆ.

ನಾನು ಇಂದು ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ ಸದಸ್ಯತ್ವಕ್ಕೆ ಹಾಗೂ ಎಲ್ಲ ರಾಜಕೀಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷದಲ್ಲಿ ಮುಂದುವರಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ ಭುಟಿಯಾ 2013ರಲ್ಲಿ ಟಿಎಂಸಿ ಸೇರಿದ್ದರು. 2014ರಲ್ಲಿ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸ್ಫರ್ಧಿಸಿ ಪರಾಭವಗೊಂಡಿದ್ದರು.

Facebook Comments

Sri Raghav

Admin