ಸಂಪುಟ ಮಾಜಿ ಕಾರ್ಯದರ್ಶಿ ಟಿಎಸ್‍ಆರ್ ಸುಬ್ರಹ್ಮಣ್ಯಂ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

TSR-Subramanian

ನವದೆಹಲಿ,ಫೆ.26- ಸಂಪುಟ ಮಾಜಿ ಕಾರ್ಯದರ್ಶಿ ಟಿ.ಎಸ್.ಆರ್ ಸುಬ್ರಮಣ್ಯಂ(79) ಇಂದು ಬೆಳಿಗ್ಗೆ ನಿಧನರಾಗಿದ್ದು, ಮೃತರ ಅಂತಿಮ ಸಂಸ್ಕಾರ ಸಂಜೆ 5.30ಕ್ಕೆ ಲೋಧಿ ರಸ್ತೆಯಲ್ಲಿರುವ ಸ್ಮಶಾನ್‍ಘಾಟ್‍ನಲ್ಲಿ ನಡೆಯಲಿದೆ ಎಂದು ಐಎಎಸ್ ಅಸೋಸಿಯೇಶನ್ ಟ್ವೀಟ್‍ನಲ್ಲಿ ತಿಳಿಸಿದೆ. ಸುಬ್ರಮಣ್ಯಂ ಅವರು 1961ರಲ್ಲಿ ಉತ್ತರ ಪ್ರದೇಶದ ಕ್ಯಾಡರ್ ಬ್ಯಾಚ್ ಸದಸ್ಯರಾಗಿದ್ದರು. ಆಗಸ್ಟ್ 1,1996ರಿಂದ ಮಾರ್ಚ್ 1,1998ರವರೆಗೆ ಕ್ಯಾಬಿನೆಟ್ ಕಾರ್ಯದರ್ಶಿಯಾಗಿದ್ದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕ ಸಚಿವರು ಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin