ಆಕಸ್ಮಿಕ ಬೆಂಕಿಗೆ 39 ಕುರಿಗಳ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಕನಕಪುರ, ಫೆ.27- ತಾಲ್ಲೂಕಿನ ಮರಳವಾಡಿ ಹೋಬಳಿ ದೊಡ್ಡ ಸಾದೇನಹಳ್ಳಿ ಗ್ರಾಮದಲ್ಲಿ ಕುರಿ ಮನೆಯಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ 39 ಕುರಿಗಳು ಸಜೀವ ದಹನಗೊಂಡಿರುವ ಘಟನೆ ನಡೆದಿದೆ. ದೊಡ್ಡ ಸಾದೇನಹಳ್ಳಿ ಗ್ರಾಮದ ರೈತ ರಾಜು ಎಂಬುವರಿಗೆ ಸೇರಿದ ಕುರಿಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಇದರಿಂದ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

ಎಂದಿನಂತೆ ತಮ್ಮ ಮನೆಯ ಕೋಳಿ, ಕುರಿಗಳನ್ನು ಮನೆಯಲ್ಲಿ ಕಟ್ಟಿ ಹೊರಗೆ ಹೋಗಿದ್ದ ಸಮಯದಲ್ಲಿ ಕಾಣಿಸಿಕೊಂಡ ಬೆಂಕಿ ಕುರಿಗಳನ್ನು ಆಹುತಿ ತೆಗೆದುಕೊಂಡಿದೆ.  ಅಗ್ನಿಶಾಮಕ ದಳ, ಹಾರೋಹಳ್ಳಿ ಪೊಲಿಸರು, ಕಂದಾಯ ಇಲಾಖೆ ನಿರೀಕ್ಷಕ ಕೃಷ್ಣಪ್ಪ, ಪಶು ವೈದ್ಯ ಇಲಾಖೆಯ ಉಪ ನಿರ್ದೇಶಕ ಕುಮಾರ್, ಬೆಸ್ಕಾಂ ಇಲಾಖಾ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ.

ಸರ್ಕಾರದಿಂದ ಸಿಗುವ ಪರಿಹಾರದ ಜತೆಗೆ ಪಶು ಸಂಗೋಪನಾ ಇಲಾಖೆಯಿಂದ 30 ಸಾವಿರ ಸಬ್ಸಿಡಿ ಹಣ ಸೇರಿದಂತೆ ಒಟ್ಟು 1.20 ಲಕ್ಷ ರೂ. ಸಾಲ ಮಂಜೂರು ಮಾಡಬೇಕೆಂದು ಅಧಿಕಾರಿಗಳಿಗೆ ಶಾಸಕ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ. ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ, ಟಿಎಪಿಸಿಎಂಎಸ್ ಸದಸ್ಯ ಪಡುವಣಗೆರೆ ಸಿದ್ದರಾಜು, ಮಲ್ಲೇಶ್, ಗೌರಮ್ಮ, ರಮೇಶ್, ಚೂಡೇಗೌಡ ಹಾಜರಿದ್ದರು.

Facebook Comments

Sri Raghav

Admin