ನಾಗಾಲ್ಯಾಂಡ್‍ನ ಅತ್ಯಾಕರ್ಷಕ ಹಾರ್ನ್‍ಬಿಲ್ ಉತ್ಸವವನ್ನು ನೀವೂ ಕಣ್ತುಂಬಿಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

hb

ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳಲ್ಲಿ ನಯನ ಮನೋಹರ-ಸುಂದರ ನಾಗಾಲ್ಯಾಂಡ್ ಕೂಡ ಒಂದು. ಈ ಏಳು ರಾಜ್ಯಗಳು ತನ್ನದೇ ಆದ ವೈವಿಧ್ಯತೆ ಮತ್ತು ವೈಶಿಷ್ಟತೆಗಳನ್ನು ಒಳಗೊಂಡಿದೆ. ಇಲ್ಲಿನ ಆಚರಣೆ-ಉತ್ಸವಗಳು ಲೋಕಪ್ರಿಯ. ನಾಗಾಲ್ಯಾಂಡ್‍ನಲ್ಲಿ ಪ್ರತಿ ವರ್ಷ ನಡೆಯುವ ಹಾರ್ಲ್‍ಬಿಲ್ ಫೆಸ್ಟಿವಲ್(ಖೇಚರ ಪಕ್ಷಿ ಉತ್ಸವ) ಕೂಡ ಜಗದ್ವಿಖ್ಯಾತ.

hb-4

ಇದಕ್ಕೆ ಸಾಕ್ಷಿ ಎಂಬಂತೆ ಈ ವರ್ಷ 2,43,214 ಮಂದಿಯನ್ನು ಈ ವಿಭಿನ್ನ ಉತ್ಸವ ಆಕರ್ಷಿಸಿದೆ. ಇದು ಒಂದು ದಾಖಲೆ. ಕಳೆದ ವರ್ಷ 1,12,604 ಜನರು ಈ ಆಚರಣೆಯನ್ನು ವೀಕ್ಷಿಸಿದ್ದರು. 10 ದಿನಗಳ ಕಾಲ ನಡೆದ ಉತ್ಸವವನ್ನು 2,401 ವಿದೇಶಿ ಪ್ರವಾಸಿಗರು, 38,700 ದೇಶೀಯರು ಮತ್ತು 2,20,113 ಸ್ಥಳೀಯರು ವೀಕ್ಷಿಸಿ ಸಂತಸಗೊಂಡಿದ್ದಾರೆ.

hb3

ಈ ಉತ್ಸವ ನಾಗಾಲ್ಯಾಂಡ್ ಸಂಸ್ಕøತಿಯ ಮುಕುಟ ಮಣಿ. ಡಿಸೆಂಬರ್ 1ರಂದು ಆರಂಭವಾದ ಹಾರ್ನ್‍ಬಿಲ್ ಫೆಸ್ಟಿವಲ್ 54ನೇ ರಾಜ್ಯ ಸಂಸ್ಥಾಪನೆ ದಿನವಾದ ಡಿ.10ರಂದು ಸಮಾರೋಪಗೊಂಡಿತು. ಈಶಾನ್ಯ ರಾಜ್ಯದ ನಾಗಾ ಪರಂಪರೆ ಗ್ರಾಮ್ ಕಿಸಾಮಾದಲ್ಲಿ ನಡೆದ ಮುಕ್ತಾಯ ಸಮಾರಂಭ ಅತ್ಯಂತ ಆಕರ್ಷಕವಾಗಿತ್ತು. ಬೃಹತ್ ದೀಪೋತ್ಸವ, ನಾಗಾ ಜನಪದ ಮತ್ತು ಬುಡಕಟ್ಟು ನೃತ್ಯಗಳು, ಸಂಪ್ರದಾಯಿಕ ವಾದ್ಯಗಳ ಮೇಳಗಳು ಉತ್ಸವದಲ್ಲಿ ಕಣ್ಮನ ಸೆಳೆದವು.

hb-2

ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿರುವ ಈ ಉತ್ಸವದಲ್ಲಿ ಗಣ್ಯಾತಿಗಣ್ಯರು, ಮಂತ್ರಿಮಹೋದಯರು, ವಿವಿಧ ಕ್ಷೇತ್ರಗಳ ಖ್ಯಾತನಾಮರು ಭಾಗವಹಿಸುತ್ತಾರೆ.

Facebook Comments

Sri Raghav

Admin