ಪೆಡಲ್ ಚಾಲಿತ ವಾಯು ನೌಕೆಯಲ್ಲಿ ಸ್ಟೀಫನ್ ರೌಸ್ಸನ್‍ ಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ds-1

ಫ್ರೆಂಚ್ ಬಲೂನ್ ಸಾಹಸಿ ಸ್ಟೀಫನ್ ರೌಸ್ಸನ್‍ಗೆ ಸದಾ ಹೊಸತನದ ತುಡಿತ. ಹೊಸ ಸಾಹಸಗಳನ್ನು ಕೈಗೊಳ್ಳಬೇಕೆಂಬ ಮಹದಂಬಲ. ಇದಕ್ಕಾಗಿಯೇ ಈತ ಪೆಡಲ್ ಚಾಲಿನ ವಾಯು ನೌಕೆಯೊಂದನ್ನು ನಿರ್ಮಿಸಿದ್ದು, ಅದನ್ನು ಪರೀಕ್ಷೆಗೆ ಒಳಪಡಿಸಿದರು. ಇವರು ಫ್ರೆಂಚ್ ಬಲೂನ್ ಸಾಹಸಿ ಸ್ಟೀಫನ್ ರೌಸ್ಸನ್. ಈ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‍ನಲ್ಲಿ ಇವರು ಉತ್ತರ ಕೋರ್‍ಸಿಕಾದಲ್ಲಿನ ನೈಸ್‍ನಿಂದ ಕಾಲ್ವಿವರೆಗೆ ಮೆಡಿಟರೇನಿಯನ್ ಸಾಗರವನ್ನು ಪೆಡಲ್ ಚಾಲಿತ ವಾಯು ನೌಕೆ ಮೂಲಕ ದಾಟಲು ಸಜ್ಜಾಗಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಇವರು ಸಾಕಷ್ಟು ತಯಾರಿ ನಡೆಸಿದ್ದಾರೆ.

ಕರಾವಳಿಯಿಂದ ಕರಾವಳಿಗೆ 175 ಕಿಲೋಮೀಟರ್‍ಗಳ ಈ ಯಾನವನ್ನು ಪೆಡೆಲ್ ಚಾಲಿತ ವಾಯುನೌಕೆಯಲ್ಲಿ ಕೈಗೊಳ್ಳುವುದು ಸುಲಭದ ಮಾತಲ್ಲ. ಈ ಸಾಹಸ ಪಯಣ ಅತ್ಯಂತ ಅಪಾಯಕಾರಿ. ಇಂಥ ಹಾರುವ ಯಂತ್ರವನ್ನು ಉಪಯೋಗಿಸುತ್ತಿರುವ ವಿಶ್ವದ ಪ್ರಥಮ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟೀಫನ್ ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಪುಟ್ಟ ವಿಮಾನದಂತೆ ಕಾಣುವ ಈ ವಾಯು ನೌಕೆಗೆ ಇವು ಜಿಪ್ಪಿ ಎಂದು ಹೆಸರಿಟ್ಟಿದ್ದಾರೆ. ಬೈಸಿಕಲ್‍ನಂಥ ವಿನ್ಯಾಸವನ್ನು ಇದಕ್ಕೆ ಅಳವಡಿಸಲಾಗಿರುತ್ತದೆ. ಎರಡು ಪ್ರೊಪೆಲ್ಲರ್‍ಗಳು ಮತ್ತು 20 ಮೀಟರ್ ಉದ್ದದ ಹೀಲಿಯಂ ತುಂಬಿದ ಬಲೂನ್, ಪೆಡಲ್ ಮಾಡುತ್ತಿದ್ದಂತೆ ಮುಂದಕ್ಕೆ ಚಲಿಸುತ್ತದೆ.  2008ರ ಸೆಪ್ಟೆಂಬರ್‍ನಲ್ಲಿ ಈ ಹಾರುವ ಯಂತ್ರದಿಂದ ಇಂಗ್ಲಿಷ್ ಕಡಲ್ಗಾಲುವೆ ದಾಟಲು ಯತ್ನಿಸಿದರು. ಆದರೆ ಎಂಟು ಗಂಟೆಗಳ ಪೆಡಲಿಂಗ್ ನಂತರ 35 ಕಿ.ಮೀ. ಕ್ರಮಿಸಲು ಮಾತ್ರ ಇವರಿಗೆ ಸಾಧ್ಯವಾಗಿತ್ತು. ಈಗ ಹೊಸ ವಿನ್ಯಾಸ ಹೊಸ ಹುರುಪಿನೊಂದಿಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

Facebook Comments

Sri Raghav

Admin