ಬೆಣ್ಣೆದೋಸೆ ಸಿಟಿಯಲ್ಲಿ ರೈತರ ಸಮಾವೇಶವನ್ನುದ್ದೇಶಿಸಿ ಮೋದಿ ಭಾಷಣ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ದಾವಣಗೆರೆ, ಫೆ. 27 : ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ರೈತ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ, ರೈತ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಎಂದಿನಂತೆ ಪ್ರಧಾನಿ  ಮೋದಿ ಇಂದೂ ಕೂಡ ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೊದಲು  ರೈತರಿಗಾಗಿ ಕೇಂದ್ರ ಸರ್ಕಾರ ತಂದ ಯೋಜನೆಗಳನ್ನು ಪ್ರಸ್ತಾಪಿಸಿದರು.  ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದ ಅವರು, ಕೇಂದ್ರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಖರ್ಚು ಮಾಡದಿರುವುದನ್ನು ಖಂಡಿಸಿದರು. ಸಿದ್ದರಾಮಯ್ಯನವರದ್ದು ಸೀದಾ ರುಪಾಯ್  ಸರ್ಕಾರ ಅನ್ನುವ ಮೂಲಕ ಮತ್ತೊಮ್ಮೆ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.    ಈ ಬಾರಿ ಬಿಜೆಪಿ ತನ್ನಿ, ಬಿಜೆಪಿ ಗೆಲ್ಲಿಸಿ ಎಂದು ಕನ್ನಡದಲ್ಲಿ ಹೇಳುವ ಮೂಲಕ ಈ ಬಾರಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

ಇದಕ್ಕೂ ಮೊದಲು  ಭಾರತ-ಕೊರಿಯಾ ನಡುವಿನ ಮುಖ್ಯ ಸಭೆಯನ್ನು ಮುಗಿಸಿದ ಮೋದಿ ಅವರು ವಿಶೇಷ ವಿಮಾನದಲ್ಲಿ ಹುಬ್ಬಳಿಗೆ ಆಗಮಿಸಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಜಿಲ್ಲಾಧಿಕಾರಿ, ಹುಬ್ಬಳಿಯ ಮೇಯರ್, ಪೊಲೀಸ್ ಆಯುಕ್ತರು, ಮತ್ತು ಹಲವು ಸ್ಥಳೀಯ ಪ್ರಮುಖ ಅಧಿಕಾರಿಗಳು ಮೋದಿ ಅವರನ್ನು ಸ್ವಾಗತಿಸಿದರು.  ಮೋದಿ ಅವರಿಗೆ ಹೂವು ಮತ್ತು ಪುಸ್ತಕಗಳನ್ನು ನೀಡಿ ಸ್ವಾಗತಿಸಲಾಯಿತು. ನಂತರ ಮೋದಿ ಅವರು ಮೂರು ವಿಶೇಷ ಹೆಲಿಕಾಪ್ಟರ್ ನಲ್ಲಿ ದಾವಣಗೆರೆಯತ್ತ ಆಗಮಿಸಿದರು.

ಮಹದಾಯಿ ಬಗ್ಗೆ ಮಾತನಾದ ಮೋದಿ  : 
‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಪರಿಹರಿಸುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ಆದರೆ, ಪ್ರಧಾನಿ ಮೋದಿ ಸುಮಾರು ಒಂದು ಗಂಟೆ ಭಾಷಣ ಮಾಡಿದರೂ ಉತ್ತರ ಕರ್ನಾಟಕದ ಜಲ್ವಂತ ಸಮಸ್ಯೆಯಾದ ಮಹದಾಯಿ ಹೋರಾಟ ಬಗ್ಗೆ ಮಾತನಾಡದೇ ಇರುವುದು ರೈತರಲ್ಲಿ ಬೇಸರವನ್ನುಟುಮಾಡಿದೆ.

Facebook Comments

Sri Raghav

Admin