ಭಾರತ-ಕೊರಿಯಾ ವಾಣಿಜ್ಯ ಶೃಂಗಸಭೆ : ವಿದೇಶಿ ಬಂಡವಾಳ ಹೂಡಿಕೆಗೆ ಪ್ರಧಾನಿ ಮೋದಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

modi
ನವದೆಹಲಿ, ಫೆ.27-ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆ ಹೊಂದಿದೆ ಹಾಗೂ ಪ್ರಪಂಚದೊಂದಿಗೆ ವಾಣಿಜ್ಯ ವಹಿವಾಟು ನಡೆಸಲು ಉತ್ಸುಕವಾಗಿದೆ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿದೇಶಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದ್ದಾರೆ.  ರಾಜಧಾನಿ ದೆಹಲಿಯಲ್ಲಿ ಭಾರತ-ಕೊರಿಯಾ ವಾಣಿಜ್ಯ ಶೃಂಗಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರವು ದೇಶದಲ್ಲಿ ಸುಸ್ಥಿರ ವಾಣಿಜ್ಯ ವಾತಾವರಣವನ್ನು ಸೃಷ್ಟಿಸುವತ್ತ ಕಾರ್ಯೋನ್ಮುಖವಾಗಿದೆ ಹಾಗೂ ಇದಕ್ಕೆ ಎದುರಾಗಿರುವ ಅಡ್ಡಿ ಆತಂಕಗಳನ್ನು ನಿವಾರಿಸಿದೆ ಎಂದು ತಿಳಿಸಿದರು.

ದೇಶದಲ್ಲಿ ವಾಣಿಜ್ಯ-ವ್ಯವಹಾರಗಳನ್ನು ನಡೆಸಲು ಅನುಮಾನಗಳಿಗೆ ಎಡೆ ಇಲ್ಲದಂತೆ ನಂಬಿಕೆ-ವಿಶ್ವಾಸವನ್ನು ವೃದ್ಧಿಸಿದ್ದೇವೆ. ಇದು ಸರ್ಕಾರದ ಮನಸ್ಥಿತಿಯ ಸಂಪೂರ್ಣ ಬದಲಾವಣೆ ಯನ್ನು ಬಿಂಬಿಸುತ್ತದೆ ಎಂದು ಅವರು ಹೇಳಿದರು.  ಭಾರತವು ಈಗಾಗಲೇ ಖರೀದಿ ಸಾಮಥ್ರ್ಯದಲ್ಲಿ ವಿಶ್ವದಲ್ಲೇ ಬೃಹತ್ ಆರ್ಥಿಕ ಶಕ್ತಿಯ ದೇಶವಾಗಿದೆ. ನಾವು ಜಿಡಿಪಿ ವೃದ್ದಿ ಮೂಲಕ ಜಗತ್ತಿನಲ್ಲಿ ಐದನೇ ದೊಡ್ಡ ಆರ್ಥಿಕತೆಯ ಸಾಧನೆ ಮಾಡಲಿದ್ದೇವೆ ಎಂದು ಮೋದಿ ವಿವರಿಸಿದರು.  ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಸರಳೀಕೃತ ಕ್ರಮಗಳನ್ನು ಜÁರಿಗೊಳಿಸಲಾಗಿದೆ. ನಿಬಂಧನೆ ಮತ್ತು ಲೈಸನ್ಸ್ ನೀಡಿಕೆಯನ್ನು ಸುಲಭಗೊಳಿಸಲಾಗಿದೆ. ಕೈಗಾರಿಕಾ ಪರವಾನಗಿ ಸಿಂಧುತ್ವ ಅವಧಿಯನ್ನು ಮೂರು ವರ್ಷಗಳಿಂದ 15 ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

Facebook Comments

Sri Raghav

Admin