ವಿಧಾನಸಭಾ ಚುನಾವಣೆಗೆ ವಿವಿ ಪ್ಯಾಟ್ ಮಿಷನ್ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

manjunath-prasad
ಬೆಂಗಳೂರು, ಫೆ.27- ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ವಿವಿ ಪ್ಯಾಟ್ ಮಿಷನ್‍ಗಳನ್ನು ಬಳಕೆ ಮಾಡಲು ತೀರ್ಮಾನಿಸಿರುವುದರಿಂದ ಯಾವುದೇ ಚುನಾವಣಾ ಅಕ್ರಮ ಸಾಧ್ಯವಾಗುವುದಿಲ್ಲ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಪಾಲಿಕೆ ಸಭೆಯಲ್ಲಿಂದು ಭರವಸೆ ನೀಡಿದರು. ಸಭೆಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯ ಗಳಲ್ಲಿ ಚುನಾವಣೆ ನಡೆದಾಗ ಇವಿಎಂ ಮಿಷನ್‍ನಲ್ಲಿ ದೋಷ ಕಂಡು ಬಂದು ಚುನಾವಣೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಂತಹ ಯಾವುದೇ ಲೋಪ ರಾಜ್ಯದಲ್ಲಿ ಬರಬಾರದೆಂಬ ಉದ್ದೇಶದಿಂದ ವಿವಿ ಪ್ಯಾಟ್ ಮಿಷನ್ ಬಳಕೆ ಮಾಡಲು ಚುನಾವಣಾ ಆಯೋಗ ಸೂಚಿಸಿದೆ ಎಂದು ತಿಳಿಸಿದರು.

ಬೆಂಗಳೂರು ನಗರ ಚುನಾವಣಾಧಿಕಾರಿಯಾಗಿ ನಾನೂ ಕೂಡ ಜಿಲ್ಲೆ ವ್ಯಾಪ್ತಿಯ ಎಲ್ಲ ಮತ ಕೇಂದ್ರಗಳಲ್ಲಿ ವಿವಿ ಪ್ಯಾಟ್ ಯಂತ್ರ ಅಳವಡಿಸುತ್ತಿದ್ದೇವೆ ಎಂದು ಹೇಳಿದರು. ಈ ಹಿಂದೆ ಇವಿಎಂ ಯಂತ್ರದ ಮೂಲಕ ಬೀಪ್‍ಸೌಂಡ್ ಬರುತ್ತಿತ್ತು. ಈಗ ವಿವಿ ಪ್ಯಾಡ್‍ನಲ್ಲಿ ಬೀಪ್ ಸೌಂಡ್ ಬರುವುದಿಲ್ಲ. ಆದರೆ, ಮತ ಚಲಾಯಿಸಿದ 7 ಸೆಕೆಂಡ್‍ನಲ್ಲಿ ಯಾವ ವ್ಯಕ್ತಿಗೆ ಮತ ಹಾಕಿದ್ದೀರಿ ಎಂಬುದನ್ನು ವಿವಿ ಪ್ಯಾಡ್ ತೋರಿಸುತ್ತೆ. ಅದನ್ನು ನೀವು ಗಮನಿಸಬೇಕು ಎಂದು ಹೇಳಿದರು. ಇನ್ನು ಮುಂದೆ ಚುನಾವಣೆಯಲ್ಲಿ ಅಕ್ರಮ ನಡೆಯು ವುದಿಲ್ಲ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

Facebook Comments

Sri Raghav

Admin