ಕಾರ್ತಿಕ್ ಬಂಧನ ಸೇಡಿನ ರಾಜಕೀಯ : ಖರ್ಗೆ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

mallikarjun-kharge

ಕಲಬುರಗಿ,ಫೆ.28-ರಾಜ್ಯ ಚುನಾವಣೆ ಹತ್ತಿರವಿರುವಾಗ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ದೃತಿಗೆಡಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿಕ್‍ನನ್ನು ಚೆನ್ನೈನಲ್ಲಿ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿರುವುದಕ್ಕೆ ಪ್ರತಿಕ್ರಿಯಿಸಿ ಕೇಂದ್ರದ ನಡೆಯ ಬಗ್ಗೆ ಕಿಡಿಕಾರಿದರು.

ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಗೂ ಇದೇ ರೀತಿ ಕಿರುಕುಳ ನೀಡಿದ್ದರು. ಬಿಜೆಪಿಯವರು ಎಷ್ಟು ತೊಂದರೆ ಕೊಡುತ್ತಾರೊ ಕಾಂಗ್ರೆಸ್‍ಗೆ ಅಷ್ಟೊ ಒಳ್ಳೆಯದು. ಚುನಾವಣೆ ಸಮೀಪಿಸುತ್ತಿರುವಾಗ ಕಾರ್ತಿಕ್ ಚಿದಂಬರಂ ಬಂಧನ ಸೇಡಿನ ಕ್ರಮವಾಗಿದೆ ಎಂದು ಖರ್ಗೆ ಹೇಳಿದರು.

Facebook Comments

Sri Raghav

Admin