ಲಂಡನ್ ಬೆಳಕಿನ ಹಬ್ಬದ ನವ ಪರಿಕಲ್ಪನೆಯ ಕಲಾಕೃತಿಗಳು ನಿಮ್ಮನ್ನು ಬೆರಗುಗೊಳಿಸದೆ ಇರದು..!

ಈ ಸುದ್ದಿಯನ್ನು ಶೇರ್ ಮಾಡಿ

ds-2
ಪ್ರತಿಯೊಂದು ಆಚರಣೆಗೂ ತನ್ನದೇ ಆದ ಅರ್ಥ ಮತ್ತು ಮಹತ್ವ ಇರುತ್ತದೆ. ಇಂಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ ನಡೆದ ಲೈಟ್ ಫೆಸ್ಟಿವಲ್‍ನಲ್ಲೂ ಬೆಳಕನ್ನು ಒಂದು ಮಾಧ್ಯಮವಾಗಿ ಬಳಸಿಕೊಂಡು ವಿವಿಧ ವಿನ್ಯಾಸದ ಅತ್ಯಾಕರ್ಷಕ ದೀಪ ವೈಭವವನ್ನು ಸೃಷ್ಟಿಸಲಾಯಿತು.  ಇಂಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ ಪ್ರತಿ ವರ್ಷ ಚಳಿಗಾಲದಲ್ಲಿ ಲುಮಿರ್ ಲೈಟ್ ಫೆಸ್ಟಿವಲ್ ನಡೆಯುತ್ತದೆ. ಬ್ರಿಟಿಷ್ ಮತ್ತು ವಿವಿಧ ದೇಶಗಳ ಕಲಾವಿದರ ವಿಶಿಷ್ಟ ಬೆಳಕಿನ ವಿನ್ಯಾಸಗಳು ಕಣ್ಮನ ಸೆಳೆಯುತ್ತವೆ. ಲಂಡನ್‍ನ ಬೀದಿಗಳು, ಸಾರ್ವಜನಿಕ ಸ್ಥಳಗಳು, ಕಟ್ಟಡಗಳು ಬೆಳಕಿನೋತ್ಸವದಲ್ಲಿ ದೇದೀಪ್ಯಮಾನವಾಗಿ ಕಂಗೊಳಿಸುತ್ತವೆ. ಪ್ರಸಿದ್ಧ ಬೆಳಕು ವಿನ್ಯಾಸ ಕಲಾವಿದರುಗಳಾದ ಟ್ರಾಸಿ ಎಮಿನ್, ಅಲಾ ಮಿನಾವಿ, ಜ್ಯೂಲಿಯನ್ ಒಫೀ ಮತ್ತು ಮಿಗ್ಯೂಲ್ ಚೆವಾಲಿಯರ್ ಈ ಕಲೆ ಸೃಷ್ಟಿಕರ್ತರು.

london-lumiere-light-festiv

ಲಂಡನ್‍ನ ಕಿಂಗ್ಸ್ ಕ್ರಾಸ್‍ನಲ್ಲಿ ಬೃಹತ್ ಮೇಜು ದೀಪ, ಸೌತ್ ಬ್ಯಾಂಕ್‍ನಲ್ಲಿ ತ್ರಿಕೋನಾ ಕಾರದ ಬೆಳಕಿನ ಸುರಂಗ ಮತ್ತು ಸೆವೆನ್ ಡಯಲ್ಸ್ ಪ್ರದೇಶದಲ್ಲಿ ಬೆಳಕಿನಿಂದ ಉಜ್ವಲಿಸಿದ ಫಿಶ್ ಟ್ಯಾಂಕ್ ಇವು ಈ ಉತ್ಸವದಲ್ಲಿ ವಿಶೇಷ ಗಮನ ಸೆಳೆದವು. ಸೇಂಟ್ ಜೇಮ್ಸ್ ಚರ್ಚ್ ಯಾರ್ಡ್‍ನಲ್ಲಿ ಸ್ಥಾಪಿಸಿರುವ ಕಲಾವಿದ ಮಿನಾವಿಯವರ “ಮೈ ಲೈಟ್ ಇಸ್ ಯುವರ್ ಲೈಟ್” ವಿನ್ಯಾಸವು ಸಿರಿಯಾದ ನಿರಾಶ್ರಿತರ ಬವಣೆ ಬಿಂಬಿಸುವ ಕಲೆಯಾಗಿತ್ತು.  ಲೆಬನಾನ್‍ನಲ್ಲಿ ನಿರಾಶ್ರಿತರಿ ಗಾಗಿ ದುಭಾಷಿಯಾಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಮಿನಾವಿ ಹೇಳುವಂತೆ ವಸತಿಹೀನರ ಸಮಸ್ಯೆಗಳನ್ನು ಎಲ್‍ಇಡಿ ದೀಪಗಳ ಬಳಸಿ ಬಿಂಬಿಸಿದ್ದೇನೆ.  ಇದನ್ನು ದಾರಿಹೋಕರು ಕೆಲವು ಕ್ಷಣಗಳ ಕಾಲ ವೀಕ್ಷಿಸಿ ಇದರ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡರೆ ನನ್ನ ಪ್ರಯತ್ನ ಸಾರ್ಥಕವಾಗುತ್ತದೆ.

ds1

Facebook Comments

Sri Raghav

Admin