‘ಅಧಿಕಾರ ಇದ್ದಾಗ ಬೆಂಗಳೂರನ್ನು ಲೂಟಿ ಹೊಡೆದು ಈಗ ಪಾದಯಾತ್ರೆ ಮಾಡಿದರೆ ಏನು ಪ್ರಯೋಜನ’

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--Siddaramaiah--

ಬೆಂಗಳೂರು, ಮಾ.1- ಅಧಿಕಾರ ಇದ್ದಾಗ ಬೆಂಗಳೂರನ್ನು ಲೂಟಿ ಹೊಡೆದವರು ಯಾವ ಪಾದಯಾತ್ರೆ ಮಾಡಿದರೆ ಏನು ಪ್ರಯೋಜನ ಎಂದು ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು. ಬೆಂಗಳೂರು ಪ್ರದಕ್ಷಿಣೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಅಧಿಕಾರ ಇದ್ದ ಸಂದರ್ಭದಲ್ಲಿ ಕೊಳ್ಳೆಹೊಡೆದವರು ಈಗ ಬೆಂಗಳೂರು ರಕ್ಷಿಸಿ ಎಂದು ಹೊರಟ್ಟಿದ್ದಾರೆ. ಜನ ಇವರ ಮಾತನ್ನು ನಂಬುವುದಿಲ್ಲ ಎಂದು ಬಿಜೆಪಿಯವರ ಯಾತ್ರೆಗೆ ತಿರುಗೇಟು ನೀಡಿದರು.

ಓಕಳಿಪುರಂನ ಮೊದಲ ಹಂತದ ಮೇಲ್ಸೇತುವೆ ಉದ್ಘಾಟನೆ, ಫ್ರೀಡಂಪಾರ್ಕ್‍ನ ವಾಹನ ಕಟ್ಟಡಕ್ಕೆ ಚಾಲನೆ ನೀಡಿ ನಂತರ ಎಂಜಿ ರೋಡ್ ಪಾದಚಾರಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ ಸಿಎಂ, ಟೆಂಡರ್ ಶ್ಯೂರ್ ಮೂಲಕ ಮೇಲ್ದರ್ಜೆಗೇರಿದ ಚರ್ಚ್‍ಸ್ಟ್ರೀಟ್ ರಸ್ತೆ ಉದ್ಘಾಟಿಸಿದರು. ಓಕಳಿಪುರಂ ಜಂಕ್ಷನ್‍ನಿಂದ ಫೌಂಟೆನ್ ವೃತ್ತದ ವರೆಗಿನ ಕಾರಿಡಾರ್ ರಸ್ತೆ, 430 ಮೀಟರ್ ಮೇಲ್ಸೇತುವೆ, ಅಂಡರ್‍ಪಾಸ್, ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿಯ ಮೊದಲನೆ ಹಂತವನ್ನು ಸಿಎಂ ಉದ್ಘಾಟಿಸಿದರು. ಉದ್ಘಾಟನೆ ವೇಳೆ ಕಾರ್ಯಕರ್ತರು ಸಿದ್ದು ಮಹಾರಾಜ್‍ಗೆ ಜೈ ಎಂದು ಘೋಷಣೆಗಳನ್ನು ಕೂಗುತ್ತಿದ್ದದ್ದು ಕೇಳಿಬಂತು. ಅದನ್ನೆ ಪುನರುಚ್ಚರಿಸಿ ಜೋರಾಗಿ ನಗೆಯಾಡಿದ ಸಿಎಂ, ಸಿದ್ದು ಮಹಾರಾಜ್‍ಗೆ ಜೈಯಂತೆ ಎಂದು ಹೇಳಿದರು.

ಶಾಸಕ ಹ್ಯಾರಿಸ್ ಪರವೂ ಅವರ ಬೆಂಬಲಿಗರು ಘೋಷಣೆ ಕೂಗಿದರು. ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಅವರ ಬೆಂಬಲಿಗರು ಕಾಂಗ್ರೆಸ್ ಬಾವುಟಗಳನ್ನು ಹಿಡಿದು ಶಕ್ತಿ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಸಂಪತ್‍ರಾಜ್, ಶಾಸಕರು, ವಿಧಾನಪರಿಷತ್ ಸದಸ್ಯರು, ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Facebook Comments

Sri Raghav

Admin