ಕೆಪಿಎಸ್’ಸಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

KPsc-1

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್’ಸಿ)ವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 30
ಹುದ್ದೆಗಳ ವಿವರ
ಗ್ರೂಪ್ ‘ಎ’
1.ವ್ಯವಸ್ಥಾಪಕ ಐಟಿ – 01
ಗ್ರೂಪ್ ‘ಬಿ’
2.ಪರಿಸರ ಸಹಾಯಕ ಅಧಿಕಾರಿ – 14
3.ಸಹಾಯಕ ವೈಜ್ಞಾನಿಕ ಅಧಿಕಾರಿ – 03
4.ಕಾನೂನು ಸಹಾಯಕ – 01
ಗ್ರೂಪ್ ‘ಸಿ’
5.ವೈಜ್ಞಾನಿಕ ಸಹಾಯಕ – 04
6.ಪ್ರಥಮ ದರ್ಜೆ ಸಹಾಯಕರು – 01
7.ದ್ವಿತೀಯ ದರ್ಜೆ ಸಹಾಯಕರು – 04
8.ಕ್ಷೇತ್ರ ಸಹಾಯಕರು – 05
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಸಿಎಸ್/ಐಟಿ ವಿಷಯದಲ್ಲಿ ಬಿಇ/ಎಂಇ ಪದವಿ, ಕ್ರ.ಸಂ 2ರ ಹುದ್ದೆಗೆ ಎಂಎಸ್ಸಿ, ಎಂಇ/ಎಂ.ಟೆಕ್, ಬಿಇ/ಬಿ.ಟೆಕ್, ಕ್ರ.ಸಂ 3ರ ಹುದ್ದೆಗೆ ಎಂಎಸ್ಸಿ, ಕ್ರ.ಸಂ 4ರ ಹುದ್ದೆಗೆ ಕಾನೂನು ಪದವಿ, ಕ್ರ.ಸಂ 5ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪದವಿ, ಕ್ರ.ಸಂ 6ರ ಹುದ್ದೆಗೆ ಯಾವುದೇ ಪದವಿ, ಕ್ರ.ಸಂ 7ರ ಹುದ್ದೆಗೆ ಪಿಯುಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣದಲ್ಲಿ ಉತ್ತೀರ್ಣ, ಕ್ರ.ಸಂ 8ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ, ಪ.ಪಂ, ಪ್ರ-1 ರ ಅಭ್ಯರ್ಥಿಗಳಿಗೆ 40 ವರ್ಷದ ವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ ಶುಲ್ಕ ನಿಗದಿಮಾಡಲಾಗಿದೆ. ಪ.ಜಾ, ಪ.ಪಂ, ಪ್ರ-1, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-03-2018
ಶುಲ್ಕವನ್ನು ಪಾತಿಸಲು ಕೊನೆಯ ದಿನಾಂಕ : 26-03-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ – http://www.kpsc.kar.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments