ಬಾಲಕಿಯನ್ನು ರೇಪ್ ಮಾಡಿ, ಬೆದರಿಕೆ ಹಾಕಿ ಪರಾರಿಯಾದ ಯುವಕ

ಈ ಸುದ್ದಿಯನ್ನು ಶೇರ್ ಮಾಡಿ

Rape-Hand--01

ವಿಜಯಪುರ,ಮಾ.1-ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ನಿನ್ನೆ ಸಂಜೆ 15 ವರ್ಷದ ಬಾಲಕಿಯೊಬ್ಬಳು ಜಮೀನಿನಲ್ಲಿ ಮೇವು ತರಲೆಂದು ತೆರಳಿದ್ದಾಳೆ. ಈ ವೇಳೆ ನಾಗೇಶ್ ಭೋಜು ಚವ್ಹಾಣ್(22) ಎಂಬಾತ ಪಕ್ಕದಲ್ಲೇ ಇದ್ದ ತೋಟದ ಶೆಡ್‍ಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಇಂದು ಬೆಳಗ್ಗೆ ಈ ಬಗ್ಗೆ ಬಾಲಕಿ ತಂದೆಗೆ ವಿಷಯ ತಿಳಿದಿದ್ದು, ತಂದೆ ಝಳಕಿಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Facebook Comments

Sri Raghav

Admin