ಬಾಲಿವುಡ್ ನಿರ್ದೇಶಕ ರಾಜ್‍ಕುಮಾರ್ ಸಂತೋಷಿ ಆರೋಗ್ಯದಲ್ಲಿ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

rajkumar-santhoshi
ಮುಂಬೈ,ಮಾ.1- ಬಾಲಿವುಡ್‍ನ ಖ್ಯಾತ ನಿರ್ದೇಶಕ ರಾಜ್‍ಕುಮಾರ್‍ಸಂತೋಷಿ ಅವರು ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದು ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ನಾನಾವತಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ನಿನ್ನೆ ರಾಜ್‍ಕುಮಾರ್ ಸಂತೋಷಿ ಅವರು ಅಸ್ವಸ್ಥರಾಗಿದ್ದು ಅಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರು ಚೇತರಿಸಿಕೊಂಡಿದ್ದಾರೆ. ರಾಜ್‍ಕುಮಾರ್ ಸಂತೋಷಿ ಅವರು ಬಾಲಿವುಡ್‍ನಲ್ಲಿ ತನ್ನದೇ ಆದೇ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಇವರು ನಿರ್ದೇಶಿಸಿರುವ ಗಾಯಲ್ (1990), ದಾಮಿನಿ (1993), ಅಂದಾಜ್ ಅಪ್ನಾ ಅಪ್ನಾ (2000), ಪುಕಾರ್ (2000), ದಿ ಲೆಜೆಂಟ್ ಆಫ್ ಭಗತ್‍ಸಿಂಗ್ (2002), ಪಾಟ್ಲಾ ಪೋಸ್ಟರ್ ನಿಕ್ಲಾ ಹೀರೋ (2013) ಎಂಬ ಚಿತ್ರಗಳು ಬಾಕ್ಸ್‍ಆಫೀಸ್ ಕೊಳ್ಳೆ ಹೊಡೆದಿದೆ. ಇವರು ನಿರ್ದೇಶಿಸಿರುವ ಪುಕಾರ್ ಚಿತ್ರಕ್ಕೆ ನರ್ಗಿಸ್‍ದತ್ ಪ್ರಶಸ್ತಿ, ದಿ ಲೆಜೆಂಡ್ ಆಫ್ ಭಗತ್‍ಸಿಂಗ್ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

Facebook Comments