ಯೋಗದಿಂದ ಪ್ರಾಪ್ತಿಯಾಗುವುದು ನಿತ್ಯಾನಂದ

ಈ ಸುದ್ದಿಯನ್ನು ಶೇರ್ ಮಾಡಿ

yoga-2

ಆಹಾರ-ವಿಹಾರ ಕ್ರಮಗಳಲ್ಲಿ, ಆಚಾರ-ವಿಚಾರಗಳಲ್ಲಿ ಬದಲಾವಣೆ ಉಂಟಾಗುತ್ತಿರುವ ಸಮಾಜದಲ್ಲಿ ಮಾನಸಿಕ ಮತ್ತು ದೈಹಿಕ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆಯು ಕ್ರಮೇಣ ಏರುತ್ತಿದೆ. ಈ ಸನ್ನಿವೇಶದಲ್ಲಿ ದೇಹ ಮತ್ತು ಮನಸ್ಸನ್ನು ಶಿಸ್ತಿಗೆ ಒಳಪಡಿಸುವುದು ಯೋಗ. ಶರೀರ ಮತ್ತು ಮನಸ್ಸು – ಇವುಗಳ ಹೊಂದಾಣಿಕೆ ಯೋಗಾಭ್ಯಾಸದಿಂದ ಸಾಧ್ಯ.

ಚಿತ್ತಶುದ್ಧಿಯನ್ನು ಯೋಗಾಭ್ಯಾಸದಿಂದ ಪಡೆಯಬಹುದು. ಚಿತ್ತವನ್ನು ಗುರಿಯತ್ತ ನಿರ್ದೇಶಿಸಿ ಕೇಂದ್ರೀಕರಿಸುವ ಸಾಮಥ್ರ್ಯವೇ ಯೋಗ. ಯೋಗ ಸಾಧನೆಯಿಂದ ಬುದ್ಧಿ ಚಾಂಚಲ್ಯವನ್ನು, ಹತೋಟಿಯಲ್ಲಿ ಇರಿಸಬಹುದು; ನೋವು ಮತ್ತು ದುಃಖದಿಂದ ದೂರವಿರಬಹುದು. ಆದುದರಿಂದ, ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಬೇಕಾದರೆ, ನಿತ್ಯಾನಂದ ಪ್ರಾಪ್ತಿಯಾಗಬೇಕಾದರೆ, ರೋಗ-ರುಜಿನಗಳಿಂದ ಮುಕ್ತಿ ಪಡೆಯಬೇಕಾದರೆ, ಯೋಗ ಮಾರ್ಗವು ಅತ್ಯುತ್ತಮವಾದುದು.

Facebook Comments

Sri Raghav

Admin