ಮೇಘಾಲಯ ನೂತನ ಸಿಎಂ ಆಗಿ ಕಾನ್ರಾಡ್ ಸಂಗ್ಮಾ ನಾಳೆ ಪ್ರಮಾಣವಚನ

ಈ ಸುದ್ದಿಯನ್ನು ಶೇರ್ ಮಾಡಿ

Meghalaya--01

ಶಿಲ್ಲಾಂಗ್, ಮಾ.3-ತಮಗೆ 34 ಶಾಸಕರ ಬೆಂಬಲ ಇದೆ ಹೇಳಿಕೊಂಡಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‍ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದು, ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾನ್ರಾಡ್ ಸಂಗ್ಮಾ ನಿನ್ನೆ ರಾಜ್ಯಪಾಲರನ್ನು ಭೈೀಟಿ ಮಾಡಿ ತಮಗೆ 34 ಶಾಸಕರ ಬೆಂಬಲ ಇದೆ ಎಂದು ತಿಳಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. 60 ಸದಸ್ಯರ ವಿಧಾನಸಭೆಯಲ್ಲಿ 21 ಸ್ಥಾನಗಗಳನ್ನು ಗೆದ್ದ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿದೆ. ಸರ್ಕಾರ ರಚನೆಗೂ ಕಾಂಗ್ರೆಸ್ ಹಕ್ಕು ಮಂಡಿಸಿತ್ತು. ಆದರೆ ಬಹುಮತಕ್ಕೆ ಅಗತ್ಯವಾದ ಶಾಸಕರ ಬೆಂಬಲ ಪಡೆಯಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಮೇಘಾಲಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಯತ್ನ ಕೈಗೂಡಿಲ್ಲ.

ಎನ್‍ಪಿಪಿ 19 ಸ್ಥಾನಗಳನ್ನು ಗೆದ್ದುಕೊಂಡಿದೆ. ಪ್ರಾದೇಶಿಕ ಪಕ್ಷಗಳಾದ ಯುನೈಟೆಡ್ ಡೆಮಾಕ್ರೆಟಿಕ್(ಯುಡಿಪಿ), ಹಿಲ್ ಸ್ಟೇಟ್ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ(ಎಚ್‍ಎಸ್‍ಪಿಡಿಪಿ) ಕ್ರಮವಾಗಿ ಆರು ಮತ್ತು ಎರಡು ಸ್ಥಾನಗಳನ್ನು ಪಡೆದಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಜಯಿಸಿದೆ.

Facebook Comments

Sri Raghav

Admin