ಶಾಂತಿನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಗುಂಡಣ್ಣ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Gundanna--012

ಬೆಂಗಳೂರು, ಮಾ.5-ಮುಂದಿನ ಚುನಾವಣೆಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ದೊಮ್ಮಲೂರು ವಾರ್ಡ್ ಬಿಬಿಎಂಪಿ ಸದಸ್ಯ ಲಕ್ಷ್ಮಿನಾರಾಯಣ್ (ಗುಂಡಣ್ಣ) ಅವರಿಗೆ ಸ್ಥಳೀಯ ಸಂಘ ಸಂಸ್ಥೆ ಗಳಿಂದ ಬೆಂಬಲ ವ್ಯಕ್ತವಾಗಿದೆ. ಬಿಬಿಎಂಪಿ ಸದಸ್ಯರು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲಕ್ಷ್ಮಿನಾರಾಯಣ್ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಸೇವೆಯಿಂದಲೂ ಜನಮನವನ್ನು ಸೆಳೆದಿದ್ದಾರೆ.

ದೊಮ್ಮಲೂರು ವಾರ್ಡ್‍ನ ಅಭಿವೃದ್ಧಿಗೆ ಹಲವಾರು ಪ್ರಗತಿ ಪರ ಚಿಂತನೆಗಳೊಂದಿಗೆ ಬೆಂಗಳೂರಿಗೆ ಮಾದರಿ ವಾರ್ಡನ್ನಾಗಿ ರೂಪಿಸಿರುವ ಹೆಗ್ಗಳಿಕೆಗೂ ಪಾತ್ರರಾಗಿರುವ ಇವರು, ವಾರ್ಡ್‍ನಲ್ಲಿ ಕೆಳಸೇತುವೆ ಆಟದ ಮೈದಾನ ಸುಸಜ್ಜಿತವಾಗಿ ನಿರ್ಮಾಣವಾಗಿರುವುದಲ್ಲದೆ, ಗುಂಡಣ್ಣ ಫೌಂಡೇಶನ್ ಮುಖಾಂತರ ನಿರಂತರ ಚಟುವಟಿಕೆಯಲ್ಲಿ ತೊಡಗಿ ಪರಿಸರ ಜಾಗೃತಿ ಕಾರ್ಯ ಕ್ರಮಗಳು, ಸ್ಲಂನಲ್ಲಿ ಆರೋಗ್ಯ ತಪಾಸಣಾ ಶಿಬಿರ, ಶುದ್ಧ ಕುಡಿಯುವ ನೀರಿನ ಘಟಕಗಳಂತಹ ಕ್ರಮಗಳಿಂದಾಗಿ ಜನಬೆಂಬಲಕ್ಕೆ ಕಾರಣರಾಗಿದ್ದಾರೆ. ಈ ದಿಸೆ ಯಲ್ಲಿ ಸ್ಥಳೀಯ ವಾರ್ಡ್ ನಾಗರಿಕರು ಅವರೆಡೆ ಒಲವು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕಾರಣಗಳಿಂದಾಗಿ ಶಾಂತಿ ನಗರ ವಿಶೇಷವಾಗಿ ಗಮನ ಸೆಳೆದಿದೆ ಎಂದು ಕೆಲ ಮುಖಂಡರು ಅವರ ಪರ ನಿಂತ್ತಿದ್ದಾರೆ.

ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳಲ್ಲಿ ಕಾಂಗ್ರೆಸ್‍ಗೆ ಇರುಸು- ಮುರುಸಾಗಿದ್ದು, ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂಬ ಪ್ರಬಲ ವಾದವೂ ಕೇಳಿ ಬರುತ್ತಿದೆ. ಬಿಬಿಎಂಪಿ ಸದಸ್ಯ ಲಕ್ಷ್ಮಿನಾರಾಯಣ್ ಹೆಸರು ಕುತೂಹಲ ಕೆರಳಿಸಿದೆ.

Facebook Comments

Sri Raghav

Admin