ಹಣ ದುರ್ಬಳಕೆ ಹಗರಣ : ಲಾಲು ಪುತ್ರಿ, ಅಳಿಯನಿಗೆ ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

Misa-Lalu

ನವದೆಹಲಿ, ಮಾ.5-ಹಣ ದುರ್ಬಳಕೆ (ಪಿಎಂಎಲ್‍ಎ) ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿ ಮತ್ತು ಅವರ ಅಳಿಯ ಶೈಲೇಶ್ ಕುಮಾರ್ ಅವರಿಗೆ ವಿಶೇಷ ನ್ಯಾಯಾಲಯವೊಂದು ಇಂದು ಜಾಮೀನು ನೀಡಿದೆ.  ಈ ಇಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರು ಭಾರತಿ ಮತ್ತು ಶೈಲೇಶ್ ಅವರಿಗೆ ತಲಾ 2 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಜಾಮೀನು ಮೇರೆಗೆ ಬೈಲ್ ನೀಡಿದೆ.   ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ಬಿಟ್ಟು ಹೋಗದಂತೆ ದಂಪತಿಗೆ ಸೂಚಿಸಲಾಗಿದೆ.

Facebook Comments

Sri Raghav

Admin