ಕಲಾವಿದ ಪಿಕಾಸೋವಿನ ವಿಸ್ಮಯಕಾರಿ ಪಿಂಗಾಣಿ ಕಲಾಕೃತಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ds-5
ಹೈನುಗಾರಿಕೆಯಲ್ಲಿ ಜಗತ್ಪ್ರಸಿದ್ಧವಾಗಿರುವ ಡೆನ್ಮಾರ್ಕ್‍ನ ದಿ ಲೂಸಿಯಾನಾ ಮ್ಯೂಸಿಯಂ ಆಫ್ ಮಾಡ್ರನ್ ಆರ್ಟ್‍ಗೆ ಈಗ 60ನೇ ವರ್ಷಾಚರಣೆ ಸಂಭ್ರಮ. ಈ ಸಂದರ್ಭದಲ್ಲಿ ಖ್ಯಾತ ಚಿತ್ರಕಲಾವಿದ ಪಬ್ಲೋ ಪಿಕಾಸೋ ಅವರ ಮೂಲ ಪಿಂಗಾಣಿಗಳನ್ನು ಪ್ರದರ್ಶಿಸಲಾಯಿತು.  ಡೆನ್ಮಾರ್ಕ್ ರಾಜಧಾನಿ ಕೊಪೆನ್‍ಹಗೇನ್‍ನ ದಿ ಲೂಸಿಯಾನಾ ಮ್ಯೂಸಿಯಂ ಆಫ್ ಮಾಡ್ರನ್ ಆರ್ಟ್ ಸ್ಥಾಪನೆಗೊಂಡು 60 ವರ್ಷಗಳು ಪೂರ್ಣಗೊಂಡಿವೆ. ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಖ್ಯಾತ ಸ್ಪಾನಿಸ್ ಕಲಾವಿದ ಮತ್ತು ಶಿಲ್ಪಿ ಪಬ್ಲೊ ಪಿಕಾಸ್ ಪಿಂಗಾಣಿ ವಸ್ತುಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.

ಪಿಕಾಸೋ ಸಿರಾಮಿಕ್ಸ್ ಹೆಸರಿನ ಈ ಪ್ರದರ್ಶನದಲ್ಲಿ ಸುಮಾರು 160 ಪಿಂಗಾಣಿಗಳು ಪ್ರದರ್ಶನಗೊಂಡವು. ಇವು ಪಿಕಾಸೋ ಕುಟುಂಬದ ಖಾಸಗಿ ಸಂಗ್ರಹ ಹಾಗೂ ಪ್ಯಾರಿಸ್, ಅಂಟಿಬೆಸ್ ಮತ್ತು ಬಾರ್ಸಿಲೋನಗಳಲ್ಲಿರುವ ಪಿಕಾಸೋ ಮ್ಯೂಸಿಯಂನಿಂದ ತರಲಾಗಿದ್ದ ವಸ್ತುಗಳಾಗಿವೆ. 1946ರಲ್ಲಿ ಫ್ರಾನ್ಸ್‍ನಲ್ಲಿ ಪ್ರದರ್ಶನಗೊಂಡಿದ್ದ ಈ ವಸ್ತುಗಳನ್ನು ಈಗ ಇಲ್ಲಿ ನೋಡುವ ಅವಕಾಶ ಕಲಾ ಪ್ರೇಮಿಗಳಿಗೆ ಲಭಿಸಿದೆ. ಹೀಗಾಗಿ ಇದು ವಿಶೇಷ ಪ್ರದರ್ಶನ ಎನ್ನುತ್ತಾರೆ ಪಿಕಾಸೋ ಅವರ ಮೊಮ್ಮಗ ಬರ್ನಾಡ್ ರುಯಿಜ್ ಪಿಕಾಸೋ. ಅದ್ಭುತ ಕಲಾವಿದರಾಗಿದ್ದ ಪಿಕಾಸೋ ಒಟ್ಟು 13,500 ವರ್ಣಚಿತ್ರಗಳು ಮತ್ತು 300 ಶಿಲ್ಪಗಳನ್ನು ರಚಿಸಿದ್ದಾರೆ. 1973ರಲ್ಲಿ ಅವರು ನಿಧನರಾದರು.

ds-4 ds-2 ds-1 ds

Facebook Comments

Sri Raghav

Admin