ಭಾರತೀಯ ಮಾರುಕಟ್ಟೆಗೆ ಬಂತು 963 ಎಫ್‍ಇ ಟ್ರ್ಯಾಕ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

Tractor--01

ಚಂಡೀಗಢ, ಮಾ.7-ರೈತರಿಗೆ ತೀರಾ ಹತ್ತಿರ ಹಾಗೂ ಗುಣಮಟ್ಟದಲ್ಲಿ ದೇಶೀಯವಾಗಿ ಹಿರಿಮೆ ಗಳಿಸಿರುವ ಸ್ವರಾಜ್ ಈಗ ತನ್ನ ಸರಣಿಯ 963ಎಫ್‍ಇ ಟ್ರ್ಯಾಕ್ಟರ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.1974ರಲ್ಲಿ ಆರಂಭಗೊಂಡ ಸಂಸ್ಥೆ ಈಗ ದೇಶಾದ್ಯಂತ ಟ್ರ್ಯಾಕ್ಟರ್ ತಯಾರಿಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.  ಸ್ವಚ್ಛಭಾರತ, ರೈತರ ನೆರವಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು, ಉತ್ತರ ಭಾರತದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ಈಗ ದೇಶದ ನಾನಾಭಾಗಗಳಲ್ಲಿ 850 ವಿತರಕರನ್ನು ಹೊಂದಿದ್ದು, ಗ್ರಾಹಕ ಸ್ನೇಹಿ. 60 ಅಶ್ವಶಕ್ತಿಯ ಹೊಸ ಟ್ರ್ಯಾಕ್ಟರ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹೀಂದ್ರ ಅಂಡ್ ಮಹೀಂದ್ರ ಕಂಪೆನಿಯ ಮುಖ್ಯಸ್ಥ ಗೋಯಂಕಾ ಪ್ರಕಟಿಸಿದರು. ಈ ಟ್ರ್ಯಾಕ್ಟರ್ ಬೆಲೆ 7,40,000 ರೂ.ಗಳಾಗಿದ್ದು, ನೂತನ ಮಾದರಿಯ ಟ್ರ್ಯಾಕ್ಟರ್ ಭಾರತದ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ.

Tractor--02

Facebook Comments

Sri Raghav

Admin