ಪ್ಯಾರಾಮೋಟಾರ್‍ನೊಂದಿಗೆ ಹಿಮದಲ್ಲಿ ವೇಗದ ಸವಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ds
ಪ್ಯಾರಿಸ್‍ನಲ್ಲಿ ಈಗ ಚಳಿಗಾಲ. ಹಾಗೆಯೇ ಹಿಮ ಕ್ರೀಡೆಗಳು ಚುರುಕಾಗಿವೆ. ಇಲ್ಲೊಬ್ಬ ತನ್ನ ಹೊಸ ಸ್ಕೀಗಳಿಗೆ ಪ್ಯಾರಾ ಮೋಟಾರ್ ಯಂತ್ರ ಅಳವಡಿಸಿ ಹಿಮದಲ್ಲಿ ಸುಗಮವಾಗಿ ಮತ್ತು ವೇಗವಾಗಿ ಜಾರುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾನೆ.  ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನ ಸ್ಕೀ ಆಟಗಾರ ಆಂಟೋನಿ ಟೈಲೆಫರ್‍ನ ನವೀನ ಪರಿಕಲ್ಪನೆ ಇದು. ತಾನು ಹೊಸದಾಗಿ ಖರೀದಿಸಿದ ಸ್ಕೀಗಳಿಗೆ ಪ್ಯಾರಾ ಮೋಟಾರ್‍ಅನ್ನು ಏಕೆ ಅಳವಡಿಸಬಾರದು ಎಂಬ ಆಲೋಚನೆ ಆಂಟೋನಿಗೆ ಹೊಳೆಯಿತು. ಈತ ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾದ. ಅದರ ಫಲಶೃತಿಯಾಗಿ ಪ್ಯಾರಾಮೋಟಾರ್ ಸ್ಕೀ ಸಿದ್ದವಾಯಿತು. ಅದನ್ನು ಬೋಯಿಸ್ ಡಿ ಬೌಲೊನ್
ಪಾರ್ಕ್‍ನಲ್ಲಿ ಪ್ರಯೋಗಕ್ಕೆ ಒಳಪಡಿಸಿದ.

ಈ ಯಂತ್ರ ಪೆÇ್ರಪೆಲ್ಲರ್ ಹಿಮದಲ್ಲಿ ಜಾರುವಾಗ ಆಟಗಾರರ ವೇಗವನ್ನು ಹೆಚ್ಚಿಸಲು ನೆರವಾಗುತ್ತದೆ. ಇದನ್ನು ಕೈಯಿಂದ ನಿಯಂತ್ರಿಸಬಹುದು. ಸುಗಮವಾಗಿ, ಸುವೇಗವಾಗಿ ಮತ್ತು ಸುರಕ್ಷಿತವಾಗಿ ಸ್ಕೀಯಿಂಗ್ ಆಡಲು ಇದು ಸಹಕಾರಿ ಎನ್ನುತ್ತಾನೆ ವೃತ್ತಿಯಲ್ಲಿ ಉದ್ಯಮಿ ಹಾಗೂ ಪ್ರವೃತ್ತಿಯಲ್ಲಿ ಸ್ಕೀ ಆಟಗಾರನಾದ ಆಂಟೋನಿ. ಈ ಸಾಧನವು ಜೇಮ್ಸ್‍ಬಾಂಡ್ ಸಿನಿಮಾ ದೃಶ್ಯವನ್ನು ಹೋಲುತ್ತದೆ. ಸ್ಪೀಡ್ ರೈಡಿಂಗ್-ಪ್ಯಾರಾಗ್ಲೈಡಿಂಗ್ ಮತ್ತು ಸ್ಕೀಯಿಂಗ್‍ನ ಸಂಯೋಜನೆಯನ್ನು ಫಾನ್ಸ್‍ನ ಸ್ಕೀ ರೆಸಾರ್ಟ್‍ಗಳಲ್ಲಿ ಬಳಸಲಾಗುತ್ತದೆ. ಆದರೆ ಪ್ಯಾರಿಸ್ ನಗರಕ್ಕೆ ಮೋಟಾರ್ ಚಾಲಿತ ಸ್ಕೀಯಿಂಗ್ ಹೊಸತು.
ಸಾಮಾನ್ಯವಾಗಿ ಕ್ರಾಸ್ ಕಂಟ್ರಿ ಸ್ಕೀಯಿಂಗ್ ರೇಸರ್‍ಗಳು ಗಂಟೆಗೆ 20 ಕಿಲೋಮೀಟರ್ ವೇಗದಲ್ಲಿ ಸಾಗಿದರೆ, ಅಂಟೋನಿಯ ಪ್ಯಾರಾಮೋಟರ್ ಸ್ಕೀ ಗಂಟೆಗೆ 90 ಕಿಲೋಮೀಟರ್ ರಭಸದಲ್ಲಿ ಮುನ್ನುಗ್ಗುವ ಸಾಮಥ್ರ್ಯ ಹೊಂದಿದೆ. ಮೋಟಾರ್ ಇಂಧನ ಟ್ಯಾಂಕ್ 12 ಲೀಟರ್‍ಗಳ ಸಾಮಥ್ರ್ಯ ಹೊಂದಿದ್ದು, ನಾಲ್ಕು ಗಂಟೆಗಳ ಕಾಲ ಸತತವಾಗಿ ಇದನ್ನು ಬಳಸಬಹುದು. 26 ಕೆಜಿ ತೂಕ ಹೊಂದಿರುವ ಪ್ಯಾರಾಮೋಟಾರ್ ಬೆಲೆ 7,350 ಡಾಲರ್‍ಗಳು.

Facebook Comments

Sri Raghav

Admin