ಆಟವಾಡುತ್ತಿದ್ದಾಗ ಸಂಪ್‍ಗೆ ಬಿದ್ದು 6 ವರ್ಷದ ಬಾಲಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Sump--01

ಬೆಂಗಳೂರು, ಮಾ.9-ಆಟವಾಡುತ್ತಾ ನೀರಿನ ಸಂಪ್‍ಗೆ ಬಿದ್ದು ಆರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀಗಂಧ ನಗರದ ಹೆಗ್ಗನಹಳ್ಳಿಯ ದೇವೇಂದ್ರ-ಅಂಜಲಿ ಎಂಬುವರ ಪುತ್ರಿ ಹರಿಪ್ರಿಯಾ (6) ಮೃತಪಟ್ಟ ಬಾಲಕಿ. ಇವರ ಮನೆಯಲ್ಲಿದ್ದ ಸಂಪ್‍ನಿಂದ ನೀರು ತೆಗೆದುಕೊಳ್ಳಲು ಪಕ್ಕದ ಮನೆಯವರು ಮುಚ್ಚಳ ತೆಗೆದು ಒಂದು ಬಿಂದಿಗೆ ನೀರು ತೆಗೆದುಕೊಂಡು ಮುಚ್ಚಳ ಹಾಕದೆ ಹಾಗೆಯೇ ಬಿಟ್ಟು ಹೋಗಿದ್ದಾಗ, ಈ ಮಗು ಆಟವಾಡುತ್ತಾ ಸಂಪ್‍ನಲ್ಲಿ ಬಿದ್ದಿದೆ.

ಮನೆಯವರು ತಕ್ಷಣ ಗಮನಿಸಿ ಮಗುವನ್ನು ಸಂಪ್‍ನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಬಾಲಕಿ ಹರಿಪ್ರಿಯಾ ಎಲ್‍ಕೆಜಿ ವ್ಯಾಸಂಗ ಮಾಡುತ್ತಿದ್ದಳು. ಮಗುವಿನ ಸಾವಿನಿಂದ ಪೋಷಕರು ಹಾಗೂ ನೆರೆಹೊರೆಯವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ರಾಜಗೋಪಾಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin