ಕಾಂಗ್ರೆಸ್‍ ಟಿಕೆಟ್‍ಗಾಗಿ 3 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Congress-01
ಬೆಂಗಳೂರು, ಮಾ.10- ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸುವ ಸಂಬಂಧ ಅರ್ಜಿ ಪಡೆಯುವ ದಿನಾಂಕವನ್ನು ಸೋಮವಾರದವರೆಗೆ ವಿಸ್ತರಣೆ ಮಾಡಲಾಗಿದೆ.   ಈವರೆಗೆ 3000 ಅರ್ಜಿಗಳನ್ನು ಅಭ್ಯರ್ಥಿಗಳು ಪಡೆದಿದ್ದು, 1500 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಪಡೆಯಲು ಸೋಮವಾರದವರೆಗೆ ಅವಕಾಶ ನೀಡಲಾಗಿದೆ.  ಬರೋಬ್ಬರಿ 3000 ಜನ ಅರ್ಜಿ ಪಡೆದಿದ್ದು, ಡಿಡಿ ಸಮೇತ ಈಗಾಗಲೇ 1500ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದಾರೆ. ಸದ್ಯದಲ್ಲೇ ಅರ್ಜಿಗಳ ಪರಿಶೀಲನೆ ನಡೆಯಲಿದೆ. ನಿರೀಕ್ಷಿತ ಮಟ್ಟದಲ್ಲಿ ಈ ಬಾರಿ ಅರ್ಜಿಗಳು ಬಂದಂತಿಲ್ಲ. ಕಳೆದ ಬಾರಿ ಈ ವೇಳೆಗೆ 5000ದಷ್ಟು ಅರ್ಜಿಗಳನ್ನು ಆಕಾಂಕ್ಷಿಗಳು ಪಡೆದಿದ್ದರು. ಈಗ 3000ದಷ್ಟು ಅರ್ಜಿಗಳನ್ನು ಪಡೆಯಲಾಗಿದೆ.  ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಲು ನೀತಿ-ನಿಯಮಗಳನ್ನು ಹೆಚ್ಚಾಗಿ ಮಾಡಿರುವುದರಿಂದ ಮತ್ತು ಡಿಡಿ ಮೊತ್ತವನ್ನು ಹೆಚ್ಚಿಸಿರುವುದರಿಂದಲೂ ಕೂಡ ಅರ್ಜಿ ಸಲ್ಲಿಕೆ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin