ವಿದ್ಯಾರ್ಥಿಗೆ ಸಲ್ಯೂಟ್ ಮಾಡಿದ ಪೊಲೀಸ್ ಕಮಿಷನರ್, ವೈರಲ್ ಆಯ್ತು ವಿಡಿಯೋ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಮಾ.10 : ನಗರ ಪೊಲೀಸ್ ಆಯಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಶಾಲಾ ವಿದ್ಯಾರ್ಥಿಯೊಬ್ಬ ಸಲ್ಯೂಟ್ ಹೊಡೆದಿದ್ದು, ಪ್ರತಿಯಾಗಿ ಕಮಿಷನರ್ ಕೂಡ ಸಲ್ಯೂಟ್ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚೂರಿ ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಲೋಕಾಯುಕ್ತರ ಆರೋಗ್ಯ ವಿಚಾರಿಸಲು ಮಲ್ಯ ಅಸ್ಪತ್ರೆಗೆ ಭೇಟಿ ನೀಡಿದ್ದ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಹೊರಗೆ ಬರುತ್ತಿದ್ದರು. ಅದೇ ವೇಳೆಗೆ ಶಾಲಾ ವಿದ್ಯಾರ್ಥಿಯೊಬ್ಬ ಎದುರಾಗಿದ್ದು, ಕಮಿಷನರ್ ಅವರನ್ನು ಕಂಡು ಸಲ್ಯೂಟ್ ಹೊಡೆದಿದ್ದಾನೆ. ಪ್ರತಿಯಾಗಿ ಕಮಿಷನರ್ ವಿದ್ಯಾರ್ಥಿಗೆ ಸಲ್ಯೂಟ್ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮಿಷನರ್ ಸಲ್ಯೂಟ್ ಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ನಿರ್ಭಯವಾಗಿ ಪೊಲೀಸ್ ಕಮಿಷನರರ್ ಗೇ ಸೇಲ್ಯೂತ್ ಮಾಡಿದ ಬಾಲಕನ ಧೈರ್ಯ, ನಡತೆ ಬಗ್ಗೆ ಕೂಡ ಎಲ್ಲ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

Gif

Facebook Comments

Sri Raghav

Admin