20,000 ರೂ. ಸಾಲಕ್ಕಾಗಿ ದಲಿತ ಮಹಿಳೆಯ ಜೀವಂತ ದಹನಕ್ಕೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Burn-Women

ಬಲ್ಲಿಯಾ, ಮಾ.10- ಸಾಲ ವಸೂಲಾತಿಗಾಗಿ 45 ವರ್ಷದ ದಲಿತ ಮಹಿಳೆಯೊಬ್ಬರನ್ನು ಜೀವಂತ ದಹನ ಮಾಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಜಜೌಲಿ ಗ್ರಾಮದಲ್ಲಿ ನಡೆದಿದೆ. ಸುಟ್ಟಗಾಯಗಳಿಂದ ತೀವ್ರ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕೃತ್ಯದ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. 20,000 ರೂ.ಗಳ ಸಾಲ ವಸೂಲಾತಿಗಾಗಿ ಕೊಲೆ ಯತ್ನ ನಡೆದಿದೆ. ರೇಷ್ಮಾ ದೇವಿ ಎಂಬ ಮಹಿಳೆ ತನ್ನ ಮನೆಯಲ್ಲಿ ಮಲಗಿದ್ದಾಗ ನಿನ್ನೆ ದುಷ್ಕರ್ಮಿಗಳು ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾದರು.

ತಕ್ಷಣ ಗ್ರಾಮಸ್ಥರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.  ಈ ಘಟನೆ ಸಂಬಂಧ ಸೋನು ಮತ್ತು ಸಿದ್ಧು ಸಿಂಗ್ ಎಂಬುವನ್ನು ಬಂಧಿಸಲಾಗಿದೆ. ಮಹಿಳೆ ಆರೋಪಿಗಳಿಂದ ಸಾಲ ಪಡೆದಿದ್ದರು. 20,000 ರೂ.ಗಳನ್ನು ಮರು ಪಾವತಿಸಿದ ನಂತರವು ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin