ಜೈಲಿನೊಳಗೆ ಸೆಲ್ಫಿ ತೆಗೆದು ಫೇಸ್‍ಬುಕ್‍’ಗೆ ಅಪ್‍ಲೋಡ್ ಮಾಡಿದ ಖೈದಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Jail--01
ಮುಜಾಫರ್‍ನಗರ್, ಮಾ.11-ಉತ್ತರ ಪ್ರದೇಶದ ಮುಜಾಫರ್‍ನಗರ್ ಜಿಲ್ಲಾ ಕಾರಾಗೃಹದ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗುವಂತೆ, ಮೂವರು ವಿಚಾರಣಾಧೀನ ಕೈದಿಗಳು ಜೈಲಿನೊಳಗೆ ಸೆಲ್ಫಿ ಕ್ಲಿಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಈ ಘಟನೆಯಿಂಧ ಜೈಲಿನ ಅಧಿಕಾರಿಗಳಿಗೆ ತೀವ್ರ ಇರಿಸುಮುರಿಸಾಗಿದೆ.

ಸೆಲ್ಫಿ ತೆಗೆಯಲು ಹಾಗೂ ಅದನ್ನು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಲು ಬಳಸಿದ್ದ ಸ್ಮಾರ್ಟ್‍ಫೋನ್‍ನನ್ನು ನಿನ್ನೆ ಪೊಲೀಸರು ಕೈದಿಯಿಂದ ವಶಪಡಿಸಿಕೊಂಡಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳ ಸಂಬಂಧ ಬಂಧಿತರಾದ ಈ ಮೂವರು ಜೈಲಿನೊಳಗೇ ಸೆಲ್ಫಿ ತೆಗೆದು, ಕಾರಾಗೃಹದ ಆವರಣದೊಳಗಿನ ಸೋಷಿಯಲ್ ನೆಟ್‍ವರ್ಕ್ ಸೈಟ್‍ನಿಂದ ತಮ್ಮ ‘ಘನಂಧಾರಿ’ ಫೋಟೋವನ್ನು ಅಪ್‍ಲೋಡ್ ಮಾಡಿದ್ದರು.

ತ್ರಿವಳಿ ಹಂತಕನ ಹತ್ಯೆ :
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಬಿಡೊಲಿ ಗ್ರಾಮದ ಬಳಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯನ್ನು ನಿನ್ನೆ ರಾತ್ರಿ ಮೂವರು ಗುಂಡಿಟ್ಟು ಕೊಂದಿದ್ದಾರೆ. ಪರೋಲ್ ಮೇಲೆ ಹೊರಬಂದಿದ್ದ ಧರ್ಮೇಂದರ್ ಜೈಲಿಗೆ ಹಿಂದಿರುಗಲು ನಿರಾಕರಿಸಿ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ. ಇದೇ ವೇಳೆ, ಅದೇ ಗ್ರಾಮದ ಅರ್ಜುನ್ ಹಾಗೂ ಅವರ ಇಬ್ಬರು ಮಕ್ಕಳಾದ ರಾಜೇಂದರ್ ಮತ್ತು ಸಹೇಂದರ್ ಆತನ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ. ಗುಂಡುಗಳು ದೇಹವನ್ನು ಹೊಕ್ಕಿದ್ದ ಧರ್ಮೇಂದರ್ ಶವ ಹೊಲದಲ್ಲಿ ಪತ್ತೆಯಾಗಿತ್ತು. ಈ ಮೂವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin