ಎಸ್ಐಗೆ ಇರಿದು ಎಸ್ಕೇಪ್ ಆಗುತ್ತಿದ್ದ ಕೊಲೆ ಆರೋಪಿ ಕಾಲಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Firing--01

ವಿಜಯಪುರ, ಮಾ.12- ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಕೊಲೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರದ ಗಾಂಧಿ ಚೌಕ್ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಮುಂಜಾನೆ 4 ಗಂಟೆ ಸಂದರ್ಭದಲ್ಲಿ ನವಬಾಗ ಬಳಿ ಕೊಲೆ ಪ್ರಕರಣದ ಆರೋಪಿ ಯೂನುಸ್ ಪಟೇಲ್ ತನ್ನ ಮನೆಯಲ್ಲಿ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿದ್ದರು.

ಪೊಲೀಸರು ಮನೆಯನ್ನು ಸುತ್ತುವರೆದಿರುವುದನ್ನು ಕಂಡು ಯೂನುಸ್ ಕಾಂಪೌಂಡ್ ಹಾರಿ ಪರಾರಿಯಾಗಲು ಮುಂದಾಗಿದ್ದಾನೆ. ಇದನ್ನು ಕಂಡ ಕಾನ್‍ಸ್ಟೇಬಲ್ ಆತನನ್ನು ಹಿಡಿಯಲು ಹೋದಾಗ ಅವರನ್ನು ತಳ್ಳಿ ಚೂರಿಯಿಂದ ಇರಿದು ಓಡಲು ಮುಂದಾಗಿದ್ದಾನೆ. ತಕ್ಷಣ ಸಬ್‍ಇನ್ಸ್‍ಪೆಕ್ಟರ್ ಆರಿಫ್ ಅವರು ಶರಣಾಗಲು ಸೂಚಿಸಿದರೂ ಆರೋಪಿ ಓಡುವಾಗ ಗಾಳಿಯಲ್ಲಿ ಎರಡು ಸುತ್ತು ಗುಂಡುಹಾರಿಸಿದರೂ ಆರೋಪಿ ಜಗ್ಗಲಿಲ್ಲ.

ತಮ್ಮ ಹಾಗೂ ಸಿಬ್ಬಂದಿ ಮೇಲೆಯೇ ಆರೋಪಿ ಎರಗಿದಾಗ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ ಪಿಎಸ್‍ಐ ಆರಿಫ್, ಕಾನ್‍ಸ್ಟೇಬಲ್ ಮದನ್‍ಶೆಟ್ಟಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡೇಟು ತಿಂದಿರುವ ಆರೋಪಿ ಯೂನುಸ್ ಪಟೇಲ್ ರೌಡಿಶೀಟರ್ ಎಂದು ತಿಳಿದು ಬಂದಿದೆ. ಎಸ್‍ಪಿ ಕುಲದೀಪ್ ಕುಮಾರ್ ಜೈನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Facebook Comments

Sri Raghav

Admin