ಕನ್ನಡ ಇತಿಹಾಸದ ಮೇಲೆ ಬೆಳಕು ಚೆಲ್ಲುವ ತಾಳಗುಂದ ಉತ್ಖನನ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Talagunda--01
ಬೆಂಗಳೂರು/ತಾಳಗುಂದ, ಮಾ.12-ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ಉತ್ಖನನ ಮತ್ತು ಸಂಶೋಧನೆ ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿ ಆರಂಭವಾಗಲಿದೆ. ಭಾರತ ಪುರಾತತ್ವ ಸರ್ವೆ(ಆರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾ-ಎಎಸ್‍ಐ) ಇಲಾಖೆ ಮುಂದಿನ ವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಪ್ರದೇಶದಲ್ಲಿ ಉತ್ಖನನ ಪ್ರಾರಂಭಿಸಲಿದೆ.

ಕರ್ನಾಟಕ ಚರಿತ್ರೆಯ ಹೆಮ್ಮೆಯ ರಾಜವಂಶಸ್ಥರಾದ ಕದಂಬರ ಕಾಲದಲ್ಲಿ ಕನ್ನಡದ ಬಳಕೆ ಮತ್ತು ಈ ಭಾಷೆಯ ಅಸ್ತಿತ್ವದ ಮಹತ್ವದ ಮೇಲೆ ಈ ಸಂಶೋಧನೆ ಬೆಳಕು ಚೆಲ್ಲಲಿದ್ದು , ಏಳು ದಶಕಗಳ ಹಿಂದಿನ ಸಂಗತಿಗಳ ಬಗ್ಗೆ ತಿಳಿದುಬರಲಿದೆ. ಕೆಲವು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ತಾಮ್ರ ಪತ್ರ ಶಾಸನ ಪತ್ತೆಯಾಗಿತ್ತು. ತಾಳಗುಂದದ ಪ್ರಸಿದ್ಧ ಪ್ರಾಣೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಸಂದರ್ಭದಲ್ಲಿ ಕಂಡುಬಂದ ಹಲ್ಮಿಡಿ ರೂಪದ ಈ ಶಾಸನ ಕದಂಬ ದೊರೆಗಳು ಮತ್ತು ಅವರ ಆಳ್ವಿಕೆ ಕಾಲದ ಕನ್ನಡ ಭಾಷೆ ಬಗ್ಗೆ ಕೆಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿತು.

ತಾಳಗುಂದ ಕದಂಬರ ವೀರಾಗ್ರಹಿಣಿ ರಾಜ ಮಯೂರ ವರ್ಮನ ಜನ್ಮಸ್ಥಳ. ಅಲ್ಲದೆ ಇದೇ ಪ್ರದೇಶದಲ್ಲಿ ಶಾಸನ ಪತ್ತೆಯಾದ ಹಿನ್ನೆಲೆಯಲ್ಲಿ ಈಗ ಆರಂಭವಾಗಲಿರುವ ಉತ್ಖನನವು ಕನ್ನಡ ಭಾಷೆ ಇತಿಹಾಸದ ಮೇಲೆ ಮತ್ತಷ್ಟು ಬೆಳಕು ಚೆಲ್ಲಲಿದೆ.

Facebook Comments

Sri Raghav

Admin