ಕೆಂಪು ಸಾಗರವಾದ ಮುಂಬೈನ ಅಜಾದ್ ಮೈದಾನ, 50,000ಕ್ಕೂ ಹೆಚ್ಚು ರೈತರ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

Kisan--01

ಮುಂಬೈ, ಮಾ.12-ಸಾಲ ಮನ್ನಾ ಮಾಡಲು ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಮಹಾರಾಷ್ಟ್ರದ ರೈತರು ಇಂದು ಅಂತಿಮ ಹಂತದ ಪ್ರತಿಭಟನೆ ಭಾಗವಾಗಿ ದಕ್ಷಿಣ ಮುಂಬೈನ ಅಜಾದ್ ಮೈದಾನದಲ್ಲಿ ಧರಣಿ ನಡೆಸಿದರು. ಧ್ವಜಗಳನ್ನು ಹಿಡಿದಿದ್ದ ಬೃಹತ್ ಸಂಖ್ಯೆಯ ಕೃಷಿಕರು ಮೈದಾನವನ್ನು ಕೆಂಪು ಸಾಗರವನ್ನಾಗಿ ಪರಿವರ್ತಿಸಿದರು. ನಂತರ ವಿಧಾನಭವನವನ್ನು ಸುತ್ತುವರಿದು ತಮ್ಮ ಬೇಡಿಕೆಗಳನ್ನು ಈಡೇರಿಸಲು ಬಿಗಿಪಟ್ಟು ಹಿಡಿದರು.

Kisan--05

ಕಳೆದ ಆರು ದಿನಗಳಿಂದ ನಾಸಿಕ್, ಥಾಣೆ ಸೇರಿದಂತೆ ವಿವಿಧೆಡೆಗಳಿಂದ ಸುಮಾರು 180 ಕಿ.ಮೀ. ದೂರವನ್ನು ಉರಿ ಬಿಸಿಲಿನಲ್ಲಿ ಪಾದಯಾತ್ರೆ ಮೂಲಕ ಕ್ರಮಿಸಿ ಮುಂಬೈಗೆ ಆಗಮಿಸಿರುವ ರೈತರು ಮತ್ತು ಬುಡಕಟ್ಟು ಕೃಷಿಕರು ವಿಧಾನಭವನಕ್ಕೆ ಮುತ್ತಿಗೆ ಹಾಕಿ ತಮ್ಮ ಬೇಡಿಕೆಗಳಿಗೆ ಆಗ್ರಹಿಸುವುದು ಇವರ ಉದ್ದೇಶ. ಬೇಷರತ್ತಾಗಿ ಸಾಲ ಮನ್ನಾ ಮಾಡಬೇಕು, ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಿರುವ ಬುಡಕಟ್ಟು ರೈತರಿಗೆ ಅರಣ್ಯ ಭೂಮಿ ವರ್ಗಾಯಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆ. ಸಿಯೊನ್ ಪ್ರದೇಶದ ಕೆಐ ಸೋಮಯ್ಯ ಮೈದಾನದಲ್ಲಿ ನಿನ್ನೆ ರಾತ್ರಿ ವಾಸ್ತವ್ಯ ಹೂಡಿದ್ದ ರೈತರು ಇಂದು ಮುಂಜಾನೆ ಅಜಾದ್ ಮೈದಾನಕ್ಕೆ ಧಾವಿಸಿ ಕೆಲಕಾಲ ಧರಣಿ ನಡೆಸಿದರು.

Kisan--04

ತಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಸಿಪಿಐ ಜೊತೆ ಸೇರ್ಪಡೆಯಾಗಿರುವ ಅಖಿಲ ಭಾರತ ಕಿಸಾನ್ ಸಭಾ ತಿಳಿಸಿದೆ. ಪ್ರತಿಭಟನೆಯಲ್ಲಿ 50,000ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದಾರೆ ಎಂದು ಸಿಪಿಎಂ ಮುಖಂಡ ಅಶೋಕ್ ದಾವ್ಳೆ ತಿಳಿಸಿದ್ದಾರೆ. ರೈತರ ಬೃಹತ್ ಪ್ರತಿಭಟನೆ ಮತ್ತು ಮುತ್ತಿಗೆ ಹಿನ್ನೆಲೆಯಲ್ಲಿ ಮುಂಬೈನಾದ್ಯಂತ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
Kisan--03

Kisan--02

Facebook Comments

Sri Raghav

Admin