ತಹಸೀಲ್ದಾರ್ ಗೆ ಧಮ್ಕಿ ಹಾಕಿದ ನಗರಸಭಾ ಸದಸ್ಯ ಪೊಲೀಸರ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

crime
ಚಳ್ಳಕೆರೆ,ಮಾ.12-ಚಳ್ಳಕೆರೆ ತಹಸೀಲ್ದಾರ್ ಅವರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭಾ ಸದಸ್ಯ ಶಿವಮೂರ್ತಿ ಅವರನ್ನು ಚಳ್ಳಕೆರೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಳ್ಳಕೆರೆ ತಹಸೀಲ್ದಾರ್ ಕಾಂತರಾಜ್ ಅವರಿಗೆ ನಗರಸಭೆ ಸದಸ್ಯ ಶಿವಮೂರ್ತಿ ಅವರು ಕರ್ತವ್ಯಕ್ಕೆ ಅಡ್ಡಿ , ಕೊಲೆಯತ್ನ ಹಾಗೂ ಪ್ರಾಣ ಬೆದರಿಕೆವೊಡ್ಡಿದ ಸಂಬಂಧ ಚಳ್ಳಕೆರೆ ಪೊಲೀಸರಿಗೆ ತಹಸೀಲ್ದಾರ್ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ದೂರವಾಣಿಯಲ್ಲಿ ತಹಸೀಲ್ದಾರ್ ಅವರಿಗೆ ಧಮ್ಕಿ ಹಾಕಿದ ಹಾಗೂ ಪ್ರಾಣ ಬೆದರಿಕೆ ಹಾಕಿದ ಸಂಬಂಧ ಶಿವಮೂರ್ತಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್‍ನಿಂದ ಗೆದ್ದಿದ್ದ ಶಿವಮೂರ್ತಿ ಪ್ರಸ್ತುತ ಬಿಜೆಪಿಯಲ್ಲಿದ್ದಾರೆ. ತಹಸೀಲ್ದಾರ್ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

Facebook Comments

Sri Raghav

Admin