ಹೊಟ್ಟೆ ಮಂಜನ ಮಂಪರು ಪರೀಕ್ಷೆಗೆ ಕೋರ್ಟ್ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

Hotte-Manja--01

ಬೆಂಗಳೂರು, ಮಾ.12- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಕೆ.ಟಿ.ನವೀನ್ ಅಲಿಯಾಸ್ ಹೊಟ್ಟೆ ಮಂಜನ ಮಂಪರು ಪರೀಕ್ಷೆಗೆ ಕೋರ್ಟ್ ಆದೇಶಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಹೊಟ್ಟೆ ಮಂಜನನ್ನು ವಿಚಾರಣೆ ನಡೆಸಿರುವ ಎಸ್‍ಐಟಿ, ಮಂಪರು ಪರೀಕ್ಷೆಗೆ ನ್ಯಾಯಾಲಯವನ್ನು ಕೋರಿತ್ತು. ಎಸ್‍ಐಟಿ ಮನವಿಯನ್ನು ಮಾನ್ಯ ಮಾಡಿದ 3ನೇ ಎಸಿಎಂಎಂ ಕೋರ್ಟ್, ಮಂಪರು ಪರೀಕ್ಷೆಗೆ ಅನುಮತಿ ನೀಡಿದ್ದು, ಮಾ. 26ರವರೆಗೂ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿಯಿಂದ ಸೂಕ್ತ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆ ಮೂಲಕ ಮಾಹಿತಿ ಪಡೆಯಬೇಕಾದ ಅಗತ್ಯತೆಯನ್ನು ವಕೀಲರು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದರು. ಆರೋಪಿ ಪರ ವಕೀಲರ ಸಮ್ಮುಖದಲ್ಲಿ ಅಹಮದಾಬಾದ್‍ನಲ್ಲಿ ಮಂಪರು ಪರೀಕ್ಷೆ ನಡೆಯಲಿದೆ.

Facebook Comments

Sri Raghav

Admin