ಕೈಕೊಡುತ್ತಿರುವ ಎಂಜಿನ್ : 65 ಇಂಡಿಗೋ ವಿಮಾನ ಸಂಚಾರ ರದ್ದು, ಪ್ರಯಾಣಿಕರಿಗೆ ಸಂಕಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Indigep
ಮುಂಬೈ, ಮಾ.13- ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಪೂರೈಸುವ ಇಂಡಿಗೋ ವಿಮಾನ ಮತ್ತೊಮ್ಮೆ ವೈಫಲ್ಯದಿಂದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ತನ್ನ 65 ವಿಮಾನಗಳ ಹಾರಾಟವನ್ನು ಇಂದು ರದ್ದುಗೊಳಿಸಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಲಖನೌಗೆ ತೆರಳುತ್ತಿದ್ದ ಈ ಸಂಸ್ಥೆಯ ವಿಮಾನದ ಎಂಜಿನ್ ಗಗನದಲ್ಲೇ ಕೈಕೊಟ್ಟ ಕಾರಣ ತಕ್ಷಣ ಅಹಮದಾಬಾದ್‍ಗೆ ಮರಳಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಿನ್ನೆ ಬೆಳಗ್ಗೆ ನಡೆದಿತ್ತು. ಏರ್‍ಬಸ್-ಎ320 ವಿಮಾನದಲ್ಲಿ 186 ಪ್ರಯಾಣಿಕರಿದ್ದರು. ಇವರೆಲ್ಲ ಸುರಕ್ಷಿತ ಭೂ ಸ್ಪರ್ಶ ಮಾಡಿದ್ದರು. ಈ ಘಟನೆ ಬೆನ್ನಲ್ಲೇ ಇದೇ ವಿಮಾನ ಸಂಸ್ಥೆಯ ಎಂಟು ವಿಮಾನಗಳ ಎಂಜಿನ್‍ನಲ್ಲೂ ತೀವ್ರ ದೋಷ ಕಂಡುಬಂದಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನಯಾನ ನಿಯಂತ್ರಣ ಸಂಸ್ಥೆ (ಡಿಜಿಸಿಎ) ಇಂದು 65 ಇಂಡಿಗೋ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ.

ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಪಾಟ್ನಾ, ಶ್ರೀನಗರ, ಭುವನೇಶ್ವರ, ಅಮೃತ್‍ಸರ್, ಗುವಾಹತಿ ಸೇರಿದಂತೆ ಇತರೆ ಸ್ಥಳಗಳಲ್ಲಿ ವಿಮಾನ ಸಂಚಾರವನ್ನು ರದ್ದುಗೊಳಿಸಲಿದ್ದು, ಅನೇಕ ಪ್ರಯಾಣಿಕರು ಪರದಾಡುವಂತಾಗಿದೆ.

Facebook Comments

Sri Raghav

Admin