ಛತ್ತೀಸ್‍ಗಢದಲ್ಲಿ ನಕ್ಸಲರ ದಾಳಿ, 8 ಸಿ.ಆರ್.ಪಿ.ಎಫ್ ಪೊಲೀಸರು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Naxal--01
ಸುಕ್ಮಾ ,ಮಾ.13- ಛತ್ತೀಸ್‍ಗಢದ ನಕ್ಸಲರ ಪ್ರಾಬಲ್ಯ ಇರುವ ಅರಣ್ಯ ಪ್ರದೇಶದಲ್ಲಿ ಇಂದು ನಕ್ಸಲರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್)ಯ ಎಂಟು ಸಿಬ್ಬಂದಿ ಹತರಾಗಿದ್ದು , ಕೆಲವರು ಗಾಯಗೊಂಡಿದ್ದಾರೆ. ಅರಣ್ಯದಲ್ಲಿ ನಕ್ಸಲರ ವಿರುದ್ಧ ಶೋಧ ಕಾರ್ಯಾಚರಣೆ ಮುಂದುವರೆಯುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮಾವೋವಾದಿಗಳು ನಡೆಸಿದ ಈ ಆಕ್ರಮಣದಲ್ಲಿ ಸಿಆರ್‍ಪಿಎಫ್‍ನ ಎಂಟು ಪೊಲೀಸರು ಹತರಾಗಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ನಕ್ಸಲರ ಬೇಟೆ ಕಾರ್ಯಾಚರಣೆ ತೀವ್ರಗೊಂಡಿದೆ.

Facebook Comments

Sri Raghav

Admin