ಪಂಚಿಂಗ್ ಮಿಷಿನ್‍ಗೆ ಸಿಲುಕಿ ಕಾರ್ಮಿಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Dead-Body-Women

ಮೈಸೂರು,ಮಾ.13- ಪಂಚಿಂಗ್ ಮಿಷಿನ್‍ಗೆ ಕಾರ್ಮಿಕನೊಬ್ಬ ಸಿಲುಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಕುಂಬಾರ ಕೊಪ್ಪಲಿನ ಸುಭಾಷ್‍ನಗರದ ವಾಸಿ ಸುಬ್ರಮಣಿ(19) ಸಾವನ್ನಪ್ಪಿದ ಯುವಕ. ಹೆಬ್ಬಾಳ ಇಂಡಸ್ಟ್ರೀಯಲ್ ಬಡಾವಣೆಯಲ್ಲಿನ ನಿಧಿ ಇಂಡಸ್ಟ್ರೀಸ್‍ನಲ್ಲಿ ಈ ಘಟನೆ ನಡೆದಿದೆ. ಕಾರ್ಡ್ ಬೋರ್ಡ್ ತಯಾರಿಸುವ ಕೈಗಾರಿಕೆಯಾಗಿರುವ ನಿಧಿ ಇಂಡಸ್ಟೀಸ್‍ನಲ್ಲಿ ಸುಬ್ರಮಣಿ ಪಂಚಿಂಗ್ ಮಿಷಿನ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸತ್ತಿದ್ದರು. ಯಂತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹೆಬ್ಬಾಳು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin