ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Amitab--01

ಜೋಧ್‍ಪುರ್, ಮಾ.13-ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಸ್ತಾನ್ ಜೋಧ್‍ಪುರ್‍ನಲ್ಲಿ ಸಿನಿಮಾ ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದ ಬಿಗ್-ಬಿ ಇಂದು ಬೆಳಗ್ಗೆ ಹಠಾತ್ ಅಸೌಖ್ಯತೆಯಿಂದ ಅಸ್ವಸ್ಥರಾದರು. ತಕ್ಷಣ ವೈದ್ಯರ ತಂಡ ಶೂಟಿಂಗ್ ಸ್ಥಳಕ್ಕೆ ಧಾವಿಸಿ ಬಚ್ಚನ್ ಆರೋಗ್ಯ ತಪಾಸಣೆ ನಡೆಸಿತು. ವೈದ್ಯರ ಸಲಹೆ ಮೇರೆಗೆ ಹಿರಿಯ ನಟನನ್ನು ಜೋಧ್‍ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಬೈನಿಂದ ಬಚ್ಚನ್ ಅವರ ಕುಟುಂಬ ವೈದ್ಯರೂ ಸಹ ಜೋಧ್‍ಪುರ್‍ಗೆ ತೆರಳಿ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿ, ಚಿಕಿತ್ಸೆಗೆ ಸಲಹೆ-ಸೂಚನೆ ನೀಡಿದ್ದಾರೆ. ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 74 ವರ್ಷದ ಅಮಿತಾಭ್ ಕಳೆದ ಕೆಲವು ತಿಂಗಳ ಹಿಂದೆ ತೀವ್ರ ಹೊಟ್ಟೆ ನೋವಿನಿಂದ ಚಿಕಿತ್ಸೆ ಪಡೆದಿದ್ದರು. ಈ ವಯಸ್ಸಿನಲ್ಲೂ ಸಿನಿಮಾ, ಟೆಲಿವಿಷನ್ ಶೋ, ಜಾಹೀರಾತು ಮತ್ತು ಸರ್ಕಾರದ ಕಾರ್ಯಕ್ರಮಗಳ ಪ್ರಚಾರ ರಾಯಭಾರಿಯಾಗಿರುವ ಬಿಗ್-ಬಿ ಕ್ರಿಯಾಶೀಲತೆ ಅನ್ವರ್ಥನಾಮದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

Facebook Comments

Sri Raghav

Admin