ಸುಕ್ಮಾ ನಕ್ಸಲ್ ದಾಳಿಯಲ್ಲಿ ಕರ್ನಾಟಕದ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Sukama

ಹಾಸನ. ಮಾ.13 : ಇಂದು‌ ಮದ್ಯಾಹ್ನ 12.15ರಲ್ಲಿ ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾಗಿದ್ದ 10 ಮಂದಿ ಸಿಆರ್ ಪಿಎಫ್ ಯೋಧರಲ್ಲಿ ಕರ್ನಾಟಕದ ಅರಕಲಗೂಡು ತಾಲೂಕು ಹರದೂರು ಗ್ರಾಮದ ಚಂದ್ರು ಎಂಬ ಮಿಲಿಟರಿ ಜವಾನ್ ಕೂಡ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ. ಅರಕಲಗೂಡು ತಾಲೂಕು ಹರದೂರು ಗ್ರಾಮದ ಚಂದ್ರ ಎಂಬ ಮಿಲಿಟರಿ ಜವಾನ್ ಕರ್ತವ್ಯಕ್ಕೆ ತೆರಳುವ ಸಂದರ್ಭ ಇಂದು‌ ಮದ್ಯಾಹ್ನ 12.15ರಲ್ಲಿ ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ ಬಲಿಯಾಗಿದ್ದಾರೆ.

ಛತ್ತೀಸ್‍ಗಢದ ನಕ್ಸಲರ ಪ್ರಾಬಲ್ಯ ಇರುವ ಅರಣ್ಯ ಪ್ರದೇಶದಲ್ಲಿ ಇಂದು ನಕ್ಸಲರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್)ಯ 10 ಸಿಬ್ಬಂದಿ ಹತರಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಅರಣ್ಯದಲ್ಲಿ ನಕ್ಸಲರ ವಿರುದ್ಧ ಶೋಧ ಕಾರ್ಯಾಚರಣೆ ಮುಂದುವರೆಯುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ನಕ್ಸಲರ ಬೇಟೆ ಕಾರ್ಯಾಚರಣೆ ತೀವ್ರಗೊಂಡಿದೆ.

Facebook Comments

Sri Raghav

Admin