ರಾಜಕೀಯದಲ್ಲಿ ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲ : ಪ್ರಕಾಶ್‍ ರೈ

ಈ ಸುದ್ದಿಯನ್ನು ಶೇರ್ ಮಾಡಿ

Prakash-Rai--01
ಮಂಗಳೂರು, ಮಾ.14-ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾನು ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ನಟ, ಪ್ರಗತಿಪರ ಚಿಂತಕ ಪ್ರಕಾಶ್‍ರೈ ಹೇಳಿದರು. ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಯಾವುದೇ ಪಕ್ಷದ ಪರ ಪ್ರಚಾರ ಮಾಡಲ್ಲ. ಆದರೆ ಕೆಲವು ಸೈದ್ಧಾಂತಿಕ ನಿಲುವುಗಳಿಗೆ ಧಕ್ಕೆಯಾದಾಗ ನಿರ್ಭಯವಾಗಿ ಮಾತನಾಡುತ್ತೇನೆ ಎಂದರು. ಪ್ರಸ್ತುತ ರಾಜಕೀಯ ಮೇಲಾಟಗಳನ್ನು ಗಮನಿಸಿದರೆ ಬೇಸರವಾಗುತ್ತದೆ. ಹಾಗಾಗಿ ಕೆಲ ಪಕ್ಷಗಳ ವಿರುದ್ಧ ಜವಾಬ್ದಾರಿಯುತ ನಾಗರಿಕನಾದ ನಾನು ಮಾತನಾಡಲೇಬೇಕಿದೆ. ಹಾಗಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.

Facebook Comments

Sri Raghav

Admin