ಹೆತ್ತ ಹಸುಗೂಸು ಸತ್ತಿತ್ತೆಂದು ರಸ್ತೆಬದಿ ಎಸೆದು ಹೋದ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Baby--01

ದಾವಣೆಗೆರೆ, ಮಾ14-ಮಕ್ಕಳಿಗಾಗಿ ಪೂಜೆ-ಪುನಸ್ಕಾರ ಗುಡಿಗೋಪುರ ಸುತ್ತುವ ಇಂದಿನ ಕಾಲದಲ್ಲಿ ನಿರ್ಧಯಿ ಹೆತ್ತ ಹಸುಗೂಸನ್ನೆ ರಸ್ತೆಬದಿ ಎಸೆದು ಹೋಗಿರುವ ಘಟನೆ ಜಿಲ್ಲಾಸ್ಪತ್ರೆ ಬಳಿ ನಡೆದಿದೆ. ಮಗು ಬದುಕಿದ್ದರೆ ಬೇಕು, ಸತ್ತರೆ ಬೇಡವ. ಎಷ್ಟೇ ಆದರೂ ಕರುಳ ಬಳ್ಳಿ ಮೇಲೆ ಆಸೆ ಇರೋಲ್ವ. ಆದರೆ ಈ ಮಹತಾಯಿ ಮಗು ಸತ್ತಿತ್ತೆಂದು ಹೀನಾಯವಾಗಿ ಆಸ್ಪತ್ರೆ ಮುಂಭಾಗವೇ ಎಸೆದು ಹೋಗಿದ್ದಾರೆ.

ಇಂದು ಬೆಳಗ್ಗೆ ಪೌರಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾಗ ಬಟ್ಟೆಯಲ್ಲಿ ಸುತ್ತಿದ್ದ ಮಗುವಿನ ಶವ ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆ ಸಿಬ್ಬಂದಿಗಳಿಗೆ ಪೌರಕಾರ್ಮಿಕರು ವಿಷಯ ತಿಳಿಸಿದ್ದಾರೆ. ಯಾರೋ ಚಿಕಿತ್ಸೆ ಬಂದು ಮಗು ಸತ್ತ ಕೂಡಲೇ ಇಲ್ಲೇ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಈ ಸಂಬಂಧ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin