ನಂದಿಬೆಟ್ಟದ ಟಿಪ್ಪು ಡ್ರಾಪ್‍ನಿಂದ ಹಾರಿ ಮಹಿಳೆ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Women-Suicidee--01

ಚಿಕ್ಕಬಳ್ಳಾಪುರ, ಮಾ.15- ಐತಿಹಾಸಿಕ ನಂದಿಬೆಟ್ಟದ ಟಿಪ್ಪು ಡ್ರಾಪ್‍ನಿಂದ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶ್ವೇತಾ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕೋಲಾರ ತಾಲ್ಲೂಕಿನ ಮಾಲೂರು ಮೂಲದ ಶ್ವೇತಾ ನಿನ್ನೆ ಆಟೋದಲ್ಲಿ ನಂದಿ ಬೆಟ್ಟಕ್ಕೆ ತೆರಳಿ ಟಿಪ್ಪು ಡ್ರಾಪ್‍ಗೆ ತೆರಳಿ ಅಲ್ಲಿಂದ ಹಾರಿ ಸುಮಾರು 2,000 ಅಡಿಗಳ ಪ್ರಪಾತಕ್ಕೆ ಬಿದ್ದಿದ್ದಾಳೆ. ದೇಹ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದ್ದು, ಮೃತ ದೇಹವನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟು 38ನೆ ತಿರುವಿನ ಮೂಲಕ ಶವವನ್ನು ಹೊರ ತೆಗೆದಿದ್ದು , ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಈ ಸಂಬಂಧ ನಂದಿ ಗಿರಿಧಾಮ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin