ಮಣಿಪುರದಲ್ಲಿ ಸ್ಮಗ್ಲರ್ ಅರೆಸ್ಟ್, ಬರೋಬ್ಬರಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Drugs
ಇಂಫಾಲ್, ಮಾ.15- ಈಶಾನ್ಯ ರಾಜ್ಯ ಮಣಿಪುರದ ಟೆಗ್ನೊಪಾಲ್ ಜಿಲ್ಲೆಯಲ್ಲಿ ಕಳ್ಳಸಾಗಣೆದಾರನೊಬ್ಬನನ್ನು ಬಂಧಿಸಿರುವ ಭದ್ರತಾ ಪಡೆಗಳು 12 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಮಣಿಪುರ-ಅಸ್ಸಾಂ ಚೆಕ್‍ ಪೋಸ್ಟ್ ಬಳಿ ಆರೋಪಿಯನ್ನು ಬಂಧಿಸಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಪ್ರಕಟಣೆ ತಿಳಿಸಿದೆ. ಆರೋಪಿಯನ್ನು ಜಪ್ತಿ ಮಾಡಲಾದ ಮಾಲಿನೊಂದಿಗೆ ಇಂಫಾಲ್‍ನಲ್ಲಿರುವ ಮಾದಕವಸ್ತು ನಿಯಂತ್ರಣ ಮಂಡಳಿ(ಎನ್‍ಸಿಬಿ)ಗೆ ಒಪ್ಪಿಸಲಾಗಿದೆ.

Facebook Comments

Sri Raghav

Admin