ಯುಗಾದಿಗೆ ‘ಕಣ್ಮಣಿ’

ಈ ಸುದ್ದಿಯನ್ನು ಶೇರ್ ಮಾಡಿ

kanmani-1

ಜನಮನ ಸೆಳೆಯಲು ಈಗಾಗಲೇ ಹಲವಾರು ಧಾರಾವಾಹಿಗಳು ಹೊಸ ಹೊಸ ರೂಪದೊಂದಿಗೆ ಬರುತ್ತಿವೆ. ಆ ನಿಟ್ಟಿನಲ್ಲಿ ಉದಯ ವಾಹಿನಿ ಈಗ ಒಂದು ರೋಮಾಂಚಕ ಪ್ರೇಮಕಥೆಯನ್ನು ತರುತ್ತಿದೆ. ಕಣ್ಮಣಿ ಎಂಬ ತ್ರಿಕೋನ ಪ್ರೇಮಕಥೆ ಧಾರಾವಾಹಿ ಮಾರ್ಚ್ 19ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ10 ಗಂಟೆಗೆ ಪ್ರಸಾರವಾಗಲಿದೆ.  ಕಣ್ಮಣಿ ಒಂದು ರೋಮಾಂಚಕ, ತ್ರಿಕೋನ ಪ್ರೇಮಕಥೆ. ಹೆಸರೇ ಹೇಳುವಂತೆ ಇದು ಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿ ಕೇಂದ್ರಿತ ಧಾರಾವಾಹಿ. ತನಗೆ ಇರೋ ಸಮಸ್ಯೆಗಳ ನಡುವೆ ಎಲ್ಲರಿಗೂ ಪ್ರೀತಿ ಹಂಚಿ ಅವರ ಪ್ರೀತಿಗೆ ಪಾತ್ರಳಾಗುವ ಒಬ್ಬ ದಿಟ್ಟ ಹುಡುಗಿ ಅಂಜಲಿ. ತನ್ನ ಜೀವನದಲ್ಲಿ ನಡೆದ ಅಹಿತಕರ ಘಟನೆಯಿಂದ ನೊಂದ ನಾಯಕಿ ತನ್ನ ಹೊಸ ಬದುಕು ಹೇಗೆ ಕಟ್ಟಿಕೊಳ್ಳುತ್ತಾಳೆ. ಅವಳ ಮುಂದೆ ಎದುರಾಗುವ ವ್ಯಕ್ತಿಗಳನ್ನು, ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಅನ್ನುವುದೇ ಈ ಕಥೆಯ ತಿರುಳು.

ಕಣ್ಮಣಿ ಪಾರಿಜತ ಟೆಲಿ ಎಂಟರ್‍ಟ್ರೆನರ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಚಿತ್ರಕಥೆ ದೇವ್, ವೆಂಕಟ್ ರಾಮ್ ಅವರದ್ದು. ಸಂಭಾಷಣೆ ರೂಪಾ ಪ್ರಭಾಕರ್, ಎಸ್. ಎಂ.ಪಾಟೀಲ್, ರಾಜಶೇಖರ್ ಬರೆಯುತ್ತಿದ್ದಾರೆ. ಪೃಥ್ವಿರಾಜ್ ಕುಲಕರ್ಣಿ ಅವರು ನಿರ್ದೇಶಿಸುತ್ತಿದ್ದು, ಜೀವ ಅವರು ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ದಿವ್ಯಾ ಶೈಲೇಶ್ ನಾಯಕಿ ಅಂಜಲಿ ಪಾತ್ರ ನಿಭಾಯಿಸುತ್ತಿದ್ದಾರೆ, ಕಿರುತೆರೆಗೆ ಈಗತಾನೆ ಕಾಲಿಟ್ಟ ದರ್ಶಕ್ ಗೌಡ ಡಿ.ಕೆ ಪಾತ್ರ ಹಾಗೂ ಇನ್ನೊಬ್ಬ ನಾಯಕ ಕಿಶನ್ ಪಾತ್ರವನ್ನು ನಂದೀಶ್ ಅಂದಗಾರ ಮಾಡುತ್ತಿದ್ದಾರೆ.

Facebook Comments

Sri Raghav

Admin