ಎಚ್.ಎಂ.ರೇವಣ್ಣ ಸಾರಿಗೆ ಸಚಿವರಾದ ಮೇಲೆ 1600 ಕೋಟಿ ರೂ.ಗಳ ಬಸ್ ಖರೀದಿ ಅವ್ಯವಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

Revanna-HM
ಬೆಂಗಳೂರು, ಮಾ.16- ಎಚ್.ಎಂ.ರೇವಣ್ಣ ಅವರು ಸಾರಿಗೆ ಸಚಿವರಾದ ನಂತರ 1600 ಕೋಟಿ ರೂ.ಗಳ ಬಸ್ ಖರೀದಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರೇವಣ್ಣ ಮತ್ತು ಐವರು ಐಎಎಸ್ ಅಧಿಕಾರಿಗಳ ವಿರುದ್ಧ ಎಸಿಬಿ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಗಣೇಶ್‍ಸಿಂಗ್ ಎಂಬುವರು ಎಚ್.ಎಂ.ರೇವಣ್ಣ, ಸಾರಿಗೆ ಇಲಾಖೆ ಅಧಿಕಾರಿಗಳಾದ ಡಾ.ಬಿ.ಬಸವರಾಜು, ಎಸ್.ಆರ್.ಉಮಾಶಂಕರ್, ವಿ. ಪೊನ್ನುರಾಜು, ಅಶೋಕ್‍ಆನಂದ್ ಮತ್ತು ಪಾಂಡುರಂಗ ಬೊಮ್ಮನಾಯಕ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಇಂದಿಲ್ಲಿ ವಿವರಿಸಿದರು.

ದೂರು ದಾಖಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾದ ಕೇವಲ ಆರೂವರೆ ತಿಂಗಳಲ್ಲಿ ಎಚ್.ಎಂ.ರೇವಣ್ಣ ಅವರು 1600 ಕೋಟಿ ರೂ.ಗಳಷ್ಟು ಬಸ್ ಖರೀದಿ ಮತ್ತು ನಿರ್ವಹಣೆ ಹೆಸರಿನಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಸಚಿವರು ಹಾಗೂ ಈ ಅಧಿಕಾರಿಗಳ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ದಾಖಲೆ ಸಹಿತ ಎಸಿಬಿಗೆ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದರು.

Facebook Comments

Sri Raghav

Admin