ಗಡಿಯಲ್ಲಿ ಒಳನುಸುಳುವ ಉಗ್ರರಿಗೆ ತಕ್ಕ ಉತ್ತರ : ರಕ್ಷಣಾ ಸಚಿವೆ ನಿರ್ಮಲಾ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Nirmala--02

ನವದೆಹಲಿ, ಮಾ.16-ಭಾರತ-ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದಕರ ಅತಿಕ್ರಮಣ ಮತ್ತು ಒಳನುಸುಳುವಿಕೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಇಂಥ ಉಗ್ರರ ಯತ್ನಗಳಿಗೆ ಅತ್ಯುಗ್ರವಾಗಿ ಪ್ರತ್ಯುತ್ತರ ನೀಡುವುದಾಗಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಇಂಡೋ-ಪಾಕ್ ಗಡಿಯಲ್ಲಿ ಗಡಿಯಾಚೆಯಿಂದ ಒಳನುಸುಳುವಿಕೆ ಯತ್ನಗಳು ಮುಂದುವರೆದಿವೆ. ಆದರೆ ನಮ್ಮ ಯೋಧರು ಕಟ್ಟೆಚ್ಚರ ವಹಿಸಿದ್ದ್ಧಾರೆ. ಇಂಥ ಕೃತ್ಯಗಳಿಗೆ ನಾವು ಆಸ್ಪದ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ರಾಜಧಾನಿ ನವದೆಹಲಿಯಲ್ಲಿ ನಿನ್ನೆ ರಾತ್ರಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ರಾಷ್ಟ್ರಗಳಂತೆ ನಮಗೆ ಡರ್ಟಿ(ನ್ಯೂಕ್ಲಿಯರ್) ಬಾಂಬ್‍ಗಳ ಬಗ್ಗೆ ಆಸಕ್ತಿ ಇಲ್ಲ ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ಟೀಕಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಅಣ್ವಸ್ತ್ರ ನಿಶ್ಯಸ್ತ್ರೀಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.  ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದ(ಎನ್‍ಪಿಟಿ)ಕ್ಕೆ ಭಾರತ ಸದಸ್ಯತ್ವ ಹೊಂದಿಲ್ಲದ್ದಿದ್ದರೂ ಸಹ ಇದಕ್ಕೆ ಭಾರತವು ಬದ್ಧವಾಗಿದೆ. ಅಣ್ವಸ್ತ್ರಗಳ ಅಕ್ರಮವಾಗಿ ವ್ಯಾಪಿಸುವುದಕ್ಕೆ ನಾವು ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Facebook Comments

Sri Raghav

Admin