ಧಾರವಾಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕೇಂದ್ರ ಸಚಿವ ಡಾ.ವೀರೇಂದ್ರಕುಮಾರ್ ದಿಢೀರ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Minister

ಧಾರವಾಡ, ಮಾ.17- ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಡಾ.ವೀರೇಂದ್ರಕುಮಾರ್ ಇಂದು ಬೆಳ್ಳಂಬೆಳಗ್ಗೆ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿಗೆ ಶಾಖ್ ನೀಡಿದರು. ಸಚಿವರು ಭೇಟಿ ನೀಡಿದ ವೇಳೆ ರೋಗಿಗಳು ಆಸ್ಪತ್ರೆ ವಿರುದ್ಧ ದೂರುಗಳ ಸುರಿಮಳೆಯನ್ನೇ ಸುರಿಸಿದರು.

ಮೂಲಭೂತ ಸೌಕರ್ಯಗಳಿಲ್ಲ, ಶುದ್ದ ಕುಡಿಯುವ ನೀರು ಸಿಗುವುದಿಲ್ಲ. ಔಷಧಿಗಳನ್ನು ಹೊರಗಡೆ ಅಂಗಡಿಗಳಲ್ಲಿ ತರಿಸಿಕೊಳ್ಳುವಂತೆ ಸೂಚಿಸುತ್ತಾರೆ. ವೈದ್ಯರು, ಸಿಬ್ಬಂದಿ ಸೌಜನ್ಯದಿಂದ ವರ್ತಿಸುವುದಿಲ್ಲ ಎಂದು ಕೆಲವು ರೋಗಿಗಳು ದೂರಿದರು. ಸಚಿವರು ಔಷಧಿ ವಿತರಣಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವಧಿ ಮೀರಿದ ಔಷಧಿ ಸ್ಟಾಕ್ ಇದ್ದದ್ದು ಕಂಡು ಡಾ.ವೀರೇಂದ್ರಕುಮಾರ್ ಗರಂ ಆದರು. ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

Facebook Comments

Sri Raghav

Admin