ಭಾರತೀಯ ಭಾಷೆಗಳಲ್ಲೂ ಎಂಬಿಬಿಎಸ್ ಪದವಿ

ಈ ಸುದ್ದಿಯನ್ನು ಶೇರ್ ಮಾಡಿ

doctor

ಚೆನ್ನೈ, ಮಾ.17-ಎಂಬಿಬಿಎಸ್‍ನಂಥ ವೃತ್ತಿಶಿಕ್ಷಣ ಪದವಿಗಳನ್ನು ಭಾರತೀಯ ಭಾಷೆಗಳಲ್ಲಿ ಬೋಧಿಸುವ ಬಗ್ಗೆ ಉಪ ರಾಷ್ಟ್ರಪತಿ ಡಾ. ಎಂ.ವೆಂಕಯ್ಯ ನಾಯ್ಡು ಒಲವು ತೋರಿದ್ದಾರೆ.  ಹಿಂದೂಸ್ತಾನ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್‍ಟಿಟ್ಯುಷನ್ಸ್‍ನ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಭಾಷೆಗಳ ರಕ್ಷಣೆಗಾಗಿ ವಿವಿಧ ರಾಜ್ಯಗಳಲ್ಲಿ ಆಯಾ ಮಾತೃಭಾಷೆಗಳಲ್ಲೇ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಪುನರುಚ್ಚರಿಸಿದರು.

ಸ್ಥಳೀಯ ಭಾಷೆಗಳಲ್ಲೇ ಎಂಬಿಬಿಎಸ್‍ನಂಥ ವೃತಿ ಶಿಕ್ಷಣ ನೀಡುವ ಸಂದರ್ಭವನ್ನು ನಾನು ಎದುರು ನೋಡುತ್ತೇನೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು. ಭಾರತೀಯ ಇತಿಹಾಸ, ಪರಂಪರೆ ಮತ್ತು ಸಂಸ್ಕøತಿಗೆ ಹೆಚ್ಚು ಮಹತ್ವದ ನೀಡುವ ಶಿಕ್ಷಣಕ್ಕೆ ಅದ್ಯತೆ ನೀಡಬೇಕು ಎಂದೂ ಉಪ ರಾಷ್ಟ್ರಪತಿ ಅಭಿಪ್ರಾಯಪಟ್ಟರು.

Facebook Comments

Sri Raghav

Admin