ಸಮುದ್ರದ ಶುದ್ಧೀಕರಿಸಿದ ನೀರು ಲೀಟರ್’ಗೆ ಕೇವಲ 5 ಪೈಸೆ..!

ಈ ಸುದ್ದಿಯನ್ನು ಶೇರ್ ಮಾಡಿ

Filtored-water

ಭೋಪಾಲ್, ಮಾ.17-ಸಮುದ್ರದ ಅಗಾಧ ಲವಣಯುಕ್ತ(ಉಪ್ಪು) ಜಲ ಸದ್ಯದಲ್ಲೇ ಕುಡಿಯುವ ನೀರಾಗಿ ಪರಿವರ್ತಿಸುವ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಸಾಗರ ಮೂಲದ ನೀರನ್ನು ಶುದ್ಧೀಕರಿಸಿ ಜನರಿಗೆ ಲೀಟರ್ ಗೆ 5 ಪೈಸೆಯಂತೆ ಪೂರೈಸಲು ಸರ್ಕಾರ ಕಾರ್ಯೋನ್ಮುಖವಾಗಲಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮಧ್ಯಪ್ರದೇಶದ ಬಂದ್ರಾಬನ್‍ನಲ್ಲಿ ನಡೆಯುತ್ತಿರುವ ಎರಡು ದಿನಗಳ ನದಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಅದನ್ನು ಕುಡಿಯಲು ಯೋಗ್ಯವಾಗುವಂತೆ ಮಾಡಲಾಗುವುದು. ಅದನ್ನು ಪ್ರತಿ ಲೀಟರ್‍ಗೆ 5 ಪೈಸೆಯಂತೆ ಮಾರಾಟ ಮಾಡಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.

ನಮ್ಮ ದೇಶದಲ್ಲಿ ಕೆಲವು ರಾಜ್ಯಗಳ ನದಿ ನೀರಿನ ಹಂಚಿಕೆಗಾಗಿ ಹೊಡೆದಾಡುತ್ತಿವೆ. ಆದರೆ ಪಾಕಿಸ್ತಾನಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರಿನ ಬಗ್ಗೆ ಯಾರೂ ಚಕಾರ ಎತ್ತದಿರುವುದು ದುರದೃಷ್ಟಕರ ಎಂದು ಕೇಂದ್ರ ಸಚಿವರು ವಿಷಾದ ವ್ಯಕ್ತಪಡಿಸಿದರು. ಭಾರತ ಮತ್ತು ಪಾಕಿಸ್ತಾನ ಆರು ನದಿಗಳನ್ನು ಹಂಚಿಕೊಂಡಿವೆ. ಮೂರು ನದಿಗಳ ನೀರು ವೃಥಾ ಪಾಕಿಸ್ತಾನಕ್ಕೆ ಪೋಲಾಗುತ್ತಿವೆ. ಈ ಬಗ್ಗೆ ಮಾಧ್ಯಮಗಳ ಸೂಕ್ತ ಜಾಗೃತಿ ಮೂಡಿಸಲ್ಲಿ ಅಥವಾ ಜನಪ್ರತಿನಿಧಿಗಳು ಇದನ್ನು ತಡೆಯುವಂತೆ ಹೋರಾಟ ನಡೆಸಿಲ್ಲ ಎಂದು ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದರು. ( click  here for more news)

Facebook Comments

Sri Raghav

Admin