ಈ ವರ್ಷಪೂರ್ತಿ ನಿಮ್ಮರಾಶಿ ಭವಿಷ್ಯ ಹೇಗಿದೆ..?

ಈ ಸುದ್ದಿಯನ್ನು ಶೇರ್ ಮಾಡಿ

rashi-bavishya

 

ವಿಲಂಬಿ ಸಂವತ್ಸರದ ಸಂಕ್ಷಿಪ್ತ ಭವಿಷ್ಯ

ಹೊಸ ಸಂವತ್ಸರ ದಿನಾಂಕ.18.3.2018 ಭಾನುವಾರ ಪ್ರಾರಂಭ. ಚಂದ್ರಮಾನ ಯುಗಾದಿ ಆಚರಣೆ, ಈ ಸಂವತ್ಸರದ ಹೆಸರು ವಿಲಂಬಿ ಸಂವತ್ಸರ, ದೇವತೆ ಸವಿತೃ. ಈ ಸಂವತ್ಸರದಲ್ಲಿ ಅಧಿಕ ಮಾಸ ಬರುವುದು. ಹೊಸ ವರ್ಷದ ಮೊದಲನೇ ದಿನವನ್ನು ಯುಗಾದಿ ಹಬ್ಬ ಆರೋಗ್ಯ ಪ್ರತಿಪತ್-ನಿಂಬದಳ ಭಕ್ಷಣಂ ಎಂದು ಸಂಭ್ರಮ ಸಡಗರಗಳಿಂದ ಹೊಸ ವರ್ಷವನ್ನು ಸ್ವಾಗತಿಸಿ ಆಚರಿಸುತ್ತೇವೆ. ನೂತನ ಸಂವತ್ಸರದ ಈ ದಿನ ಉಷಃ ಕಾಲದಲ್ಲಿ ಎದ್ದು ಮಂಗಳ ಸ್ನಾನ ಮಾಡಿ ಅಂದರೆ ಸುಗಂಧ-ತೈಲಾದಿಗಳಿಂದ ಅಭ್ಯಂಜನ ಸ್ನಾನ ಮಾಡಿ ಹೊಸ ವಸ್ತ್ರಾಭರಣವನ್ನು ಧರಿಸಿಕೊಂಡು ತಂದೆ ತಾಯಿ, ಗುರು ಹಿರಿಯರಿಗೆ ನಮಸ್ಕಾರ ಮಾಡಿ, ಗೃಹ ದೇವತೆ ಪೂಜೆ ಮಾಡಿ ಆಶೀರ್ವಾದ ಪಡೆದು , ಬೇವು-ಬೆಲ್ಲ ತಿಂದು, ತರತರಹದ ಪಕ್ವಾನ್ನ ಊಟ ಮಾಡಿ ದೇಹಕ್ಕೆ ಶ್ರೀಗಂಧ, ಕಸ್ತೂರಾಧಿ ಸುಗಂಧಗಳನ್ನು ಹಚ್ಚಿ , ಸಂಗೀತ, ನಾಟ್ಯ ಇತ್ಯಾದಿ ಶ್ರವಣ ಮಾಡಿ ಸಂತೋಷದಿಂದ ಕುಟುಂಬದವರೊಂದಿಗೆ ಕಾಲ ಕಳೆಯಬೇಕು.

# ಮೇಷ : ಈ ಸಂವತ್ಸರದಲ್ಲಿ ನಿಮ್ಮ ಆದಾಯಕ್ಕಿಂತ, ಖರ್ಚು ಎರಡರಷ್ಟು ಇರುತ್ತದೆ. ಆದರೂ ಸುಖದಿಂದ ಇರುವಿರಿ. ದುಃಖ ಕಮ್ಮಿ. ಗುರುವು ನಿಮ್ಮ ರಾಶಿಯನ್ನು ನೋಡುವುದರಿಂದ ಮತ್ತು ಶನಿಯು 9ನೆ ರಾಶಿಯಲ್ಲಿರುವುದರಿಂದ ಕೆಲಸ, ಕಾರ್ಯದಲ್ಲಿ ತೊಂದರೆ. ವ್ಯಾಪಾರ ಸ್ವಲ್ಪ ಕಮ್ಮಿ. ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೂ, ಕೈ ಹಾಕಿದ ಕೆಲಸ ಅಭಿವೃದ್ಧಿಯಾಗುವುದು. ಕುಟುಂಬದಲ್ಲಿ ವಿವಾಹ ಇತ್ಯಾದಿ ಮಂಗಳ ಕಾರ್ಯ ನಡೆಯುವುವು.

# ವೃಷಭ : ಈ ಸಂವತ್ಸರದಲ್ಲಿ ನಿಮ್ಮ ಆದಾಯ ಅತಿ ಹೆಚ್ಚು. ಖರ್ಚು ಮಾತ್ರ ಕಾಲು ಭಾಗದಷ್ಟು, ಉಳಿತಾಯ ಹೆಚ್ಚು . ಸುಖದಿಂದ ಜೀವನ ನಡೆಸುವಿರಿ. ಸ್ವಲ್ಪ ದುಃಖವೂ ಇರುವುದು. ಗುರುವು 6ರಲ್ಲಿ ಶನಿಯು 8ನೆ ರಾಶಿಯಲ್ಲಿರುವುದರಿಂದ, ಉತ್ತಮವಾಗಿ ನಿರೀಕ್ಷಿಸಿದ ಫಲ ಸಿಗದೆ, ಸ್ವಲ್ಪ ತಿರುಗಾಟ, ವ್ಯಾಪಾರದಲ್ಲಿ ಧನಾಗಮ ಪ್ರಗತಿ ಇದ್ದು ಶುಭ ಫಲ ಹೆಚ್ಚಿರುವುದು.

# ಮಿಥುನ : ಈ ಸಂವತ್ಸರದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚು ಎರಡರಷ್ಟು ಇರುವುದು. ಸುಖಕ್ಕಿಂತ , ಸ್ವಲ್ಪ ದುಃಖ ಬರುವುದು. ಶನಿಯು 7ರಲ್ಲಿ ಗುರುವು 5ರಲ್ಲಿ ಸಂಚರಿಸುತ್ತಿರುವುದರಿಂದ ಶುಭ ಫಲ ಹೆಚ್ಚಾಗಿರದೆ ವ್ಯವಹಾರ, ವ್ಯಾಪಾರದಲ್ಲಿ ತೊಂದರೆ. ಬಂಧು-ಮಿತ್ರರಲ್ಲಿ ವಿರಸ. ಮನೋವ್ಯಥೆ ಇರುವುದು.

#  ಕಟಕ : ಈ ಸಂವತ್ಸರದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚು ಎರಡರಷ್ಟು ಬರುವುದು. ಆದರೂ ದುಃಖಕ್ಕಿಂತ ಸುಖವೇ ಹೆಚ್ಚು. ನಿಮ್ಮ ರಾಶಿಗೆ 6ರಲ್ಲಿ ಶನಿ, 4ರಲ್ಲಿ ಗುರುವು ಇದ್ದು , ಧನಾಗಮ ವ್ಯಾಪಾರ ಲಾಭ. ಗೌರವ ಸಿಗುವುದು. ಕುಟುಂಬದಲ್ಲಿ ವಿವಾಹ ಇತ್ಯಾದಿ ಕಾರ್ಯ ನಡೆಯುವುವು. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.

#  ಸಿಂಹ : ಈ ಸಂವತ್ಸರದಲ್ಲಿ ಅತಿ ಹೆಚ್ಚು ಆದಾಯ ಖರ್ಚು ಕಾಲು ಭಾಗದಷ್ಟು ಮಾತ್ರ. ಮಿಕ್ಕ ಮೂರು ಭಾಗ ಉಳಿತಾಯ ಸುಖ-ದುಃಖಗಳೆರಡು ಸಮ. ನಿಮ್ಮ ರಾಶಿಯಿಂದ ಗುರುವು 3ನೆ ರಾಶಿಯಲ್ಲಿ 5ರಲ್ಲಿ ಶನಿ ಸಂಚಾರ ಇರುವುದರಿಂದ ವೃಥಾ ತಿರುಗಾಟ ಮನೋ ವ್ಯಥೆ. ಸೇವಕರಿಂದ ಹಾನಿ , ವ್ಯಾಪಾರ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಪ್ರಗತಿ. ಕುಟುಂಬದಲ್ಲಿ ಕಲಹವಿರುವುದು.

#  ಕನ್ಯಾ :  ಈ ಸಂವತ್ಸರದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚು ಎರಡರಷ್ಟು ಇರುವುದು. ಸುಖಕ್ಕಿಂತ ದುಃಖ ಇರುವುದು. ನಿಮ್ಮ ರಾಶಿಗೆ ಗುರುವು 2ನೆ ರಾಶಿಯಲ್ಲಿ, ಶನಿಯು 4ನೆ ರಾಶಿ ಸಂಚಾರ ಮಾಡುವನು. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ವಿವಾಹ, ಗೃಹಪ್ರವೇಶ, ಆಸ್ತಿ ಕೊಳ್ಳುವಿಕೆ ನಡೆಯುವುದು, ಸ್ಥಳ ಬದಲಾವಣೆ, ಹಣ ಖರ್ಚು ಆಗುವುದು. ಪ್ರತಿ ಗುರುವಾರ ಕೇತು ಗ್ರಹವನ್ನು ಪ್ರಾರ್ಥಿಸಿ, ನವಗ್ರಹ ಸುತ್ತಿರಿ.

# ತುಲಾ :  ಈ ಸಂವತ್ಸರದಲ್ಲಿ ನಿಮ್ಮ ಆದಾಯ ಅತಿ ಹೆಚ್ಚು. ಖರ್ಚು ಮಾತ್ರ ಕಾಲು ಭಾಗ ಮಿಕ್ಕದ್ದು ಉಳಿತಾಯ. ನಿಮ್ಮ ರಾಶಿಯಲ್ಲಿ ಗುರುವು ಇದ್ದು , ಗುರು ಬಲ ಚೆನ್ನಾಗಿರುತ್ತದೆ. ಶನಿಯು 3ರಲ್ಲಿರುವುದರಿಂದ ದ್ರವ್ಯ ಲಾಭ, ವ್ಯಾಪಾರ, ಉದ್ಯೋಗದಲ್ಲಿ ಅತಿ ಹೆಚ್ಚಿನ ಪ್ರಗತಿ. ಎಲ್ಲಾ ಕ್ಷೇತ್ರಗಳಲ್ಲಿಯೂ ಶುಭ ಫಲ, ಬಂಧು-ಮಿತ್ರರಿಗೆ ಸಹಾಯ ಮಾಡುವಿರಿ. ಆರೋಗ್ಯದಲ್ಲಿ ಸುಧಾರಣೆ. ಕುಟುಂಬದಲ್ಲಿ ವಿವಾಹ, ಆಸ್ತಿ ಕೊಳ್ಶಳುವಿಕೆ ಎಲ್ಲಾ ನಡೆಯುವುವು. ಪ್ರತಿ ಗುರುವಾರ ಕೇತು ಗ್ರಹವನ್ನು ಅರ್ಚಿಸಿ ನವಗ್ರಹ ಸುತ್ತಿರಿ.

#  ವೃಶ್ಚಿಕ :  ಈ ಸಂವತ್ಸರದಲ್ಲಿ ನಿಮ್ಮ ಆದಾಯಕ್ಕಿಂತ ಎರಡರಷ್ಟು ಖರ್ಚು, ಸುಖ ಹೆಚ್ಚು, ದುಃಖ ಕಮ್ಮಿ. ನಿಮ್ಮ ರಾಶಿಗೆ ಗುರುವು 12ರಲ್ಲಿ ಶನಿಯು 2ರಲ್ಲಿ ಸಂಚಾರ ಮಾಡುವುದು. ನಿಮ್ಮ ಮಿತ್ರ, ಬಂಧುವಿನಿಂದ ವಂಚಿತರಾಗುವಿರಿ. ಹಣದ ವಿಷಯದಲ್ಲಿ ಜಾಗೃತ ರಾಗಿರಿ. ನಷ್ಟ , ಕೆಲಸ ಕಾರ್ಯಗಳಲ್ಲಿ ತೊಂದರೆ ಇರುವುದು.

#  ಧನಸ್ಸು : ಈ ಸಂವತ್ಸರದಲ್ಲಿ ನಿಮ್ಮ ಆದಾಯ ಖರ್ಚು ಸಮ. ಸುಖ-ದುಃಖಗಳೂ ಸಮ. ನಿಮ್ಮ ರಾಶ್ಯಾಧಿಪತಿ ಗುರುವು ಲಾಭದಲ್ಲಿರುವುದರಿಂದ ಶನಿಯು ಲಗ್ನ ರಾಶಿಯಲ್ಲಿರುವುದರಿಂದ ಆರೋಗ್ಯದಲ್ಲಿ ಸುಧಾರಣೆ. ಬಂಧು ಮಿತ್ರರಿಗೆ ಸಹಾಯ ಮಾಡುವಿರಿ. ಆಸ್ತಿ ಕೊಳ್ಳುವಿಕೆ. ಸತ್ಕರ್ಮದಲ್ಲಿ ಆಸಕ್ತಿ. ಸರ್ಕಾರದಿಂದ ಕೆಲಸ ನಿಧಾನ. ಪ್ರಯಾಣ ಹೆಚ್ಚಾಗಿರುವುದರಿಂದ ಹಣ ಖರ್ಚು. ಸಾಲ ತೀರಿಸುವಿರಿ ಮತ್ತೆ ಸಾಲ ಮಾಡುವಿರಿ. ಪ್ರತಿ ಗುರುವಾರ ಗುರು ಗ್ರಹವನ್ನು ಪ್ರಾರ್ಥಿಸಿ, ನವಗ್ರಹ ಸುತ್ತಿರಿ.

#  ಮಕರ : ಈ ಸಂವತ್ಸರದಲ್ಲಿ ನಿಮ್ಮ ಆದಾಯ ಖರ್ಚು ಸಮ. ದುಃಖಕ್ಕಿಂತ ಸುಖ ಹೆಚ್ಚು. ನಿಮ್ಮ ರಾಶಿಗೆ 10ರಲ್ಲಿ ಗುರುವು 12ರಲ್ಲಿ ಶನಿಯು ಸಂಚಾರ ಮಾಡುವುದರಿಂದ ನಾನಾ ತರಹದ ಚಿಂತೆ. ಕಾರ್ಯ ಸಾಧನೆಗಾಗಿ ತಿರುಗಾಟ, ಪರಸ್ಥಳ ವಾಸ ಮಾಡುವಿರಿ. ಮಂಗಳ ಕಾರ್ಯಗಳು ನೆರವೇರುವುವು. ಪ್ರತಿ ಗುರುವಾರ ಗುರು ಗ್ರಹವನ್ನು ಅರ್ಚಿಸಿ, ನವಗ್ರಹ ಸುತ್ತಿರಿ.

#  ಕುಂಭ : ಈ ಸಂವತ್ಸರದಲ್ಲಿ ನಿಮ್ಮ ಆದಾಯ ಖರ್ಚು ಸಮ. ದುಃಖಕ್ಕಿಂತ ಸುಖ ಹೆಚ್ಚು. ನಿಮ್ಮ ರಾಶಿಗೆ 9ರಲ್ಲಿ ಗುರುವು 11ರಲ್ಲಿ ಶನಿಯು ಸಂಚಾರ ಮಾಡುವರು. ಆರೋಗ್ಯದಲ್ಲಿ ಸುಧಾರಣೆ, ಸ್ತಿರಾಸ್ತಿ ಕೊಳ್ಳುವಿರಿ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ಗುರು ಬಲ ಚೆನ್ನಾಗಿರುವುದರಿಂದ ವಿವಾಹ ಇತ್ಯಾದಿ ಸುಖ ಕಾರ್ಯಗಳು ನೆರವೇರುವುವು. ಪ್ರತಿ ಗುರುವಾರ ಗುರು ಗ್ರಹವನ್ನು ಅರ್ಚಿಸಿ ನವಗ್ರಹ ಸುತ್ತಿರಿ. ಪ್ರತಿ ಶನಿವಾರ ಎಳ್ಳು ದೀಪ ಸಂಜೆ ಹಚ್ಚಿ ಶನಿ ದೇವರನ್ನು ಅರ್ಚಿಸಿರಿ. ಪ್ರತಿ ಬುಧವಾರ ರಾಹು ಗ್ರಹವನ್ನು ಪ್ರಾರ್ಥಿಸಿ ನವಗ್ರಹ ಸುತ್ತಿರಿ.

#  ಮೀನ : ಈ ಸಂವತ್ಸರದಲ್ಲಿ ನಿಮ್ಮ ಆದಾಯ ಖರ್ಚು ಸಮ. ಸುಖ-ದುಃಖಗಳು ಸಮ. ಉದ್ಯೋಗ ವ್ಯಾಪಾರದಲ್ಲಿ ಅಧಿಕ ಶ್ರಮ ಪಡಬೇಕಾಗುವುದು. ಬಂಧು ಮಿತ್ರರಿಂದ ಹಾನಿ. ಕೆಲಸ ಕಾರ್ಯಗಳು ವ್ಯಾಪಾರ ಉದ್ಯೋಗದಲ್ಲಿ ನಿಧಾನ. ಪ್ರತಿ ಶನಿವಾರ ಎಳ್ಳು ದೀಪ ಸಂಜೆ ಹಚ್ಚಿ. ನವಗ್ರಹ ಸುತ್ತಿರಿ. ಶನಿಯನ್ನು ಪ್ರಾರ್ಥಿಸಿ. ಪ್ರತಿ ಬುಧವಾರ ರಾಹು ಗ್ರಹವನ್ನು ಪ್ರಾರ್ಥಿಸಿ, ನವಗ್ರಹ ಸುತ್ತಿರಿ.

ಆದಾಯ-ವ್ಯಯ
ಮೇಷ-ವೃಶ್ಚಿಕ ರಾಶಿಯವರಿಗೆ ಆದಾಯದ ಏಳರಷ್ಟು ಖರ್ಚು. ವೃಷಭ-ತುಲಾ ರಾಶಿಯವರಿಗೆ ಆದಾಯ ಹೆಚ್ಚು, ಖರ್ಚು ಕಮ್ಮಿ. ಮಿಥುನ-ಕನ್ಯಾ ರಾಶಿಯವರಿಗೆ ಖರ್ಚುವಿನ ಏಳರಷ್ಟು ಆದಾಯ. ಕರ್ಕಾಟಕ ರಾಶಿಯವರಿಗೆ ಖರ್ಚಿನ ಎರಡರಷ್ಟು ಆದಾಯ. ಸಿಂಹ ರಾಶಿಯವರಿಗೆ ಆದಾಯ ಖರ್ಚು ಸಮ. ಧನಸ್ಸು-ಮೀನ ರಾಶಿಯವರಿಗೆ ಆದಾಯ ಖರ್ಚು ಸಮ. ಮಕರ-ಕುಂಭ ರಾಶಿಯವರಿಗೆ ಆದಾಯ ಎರಡರಷ್ಟು ಖರ್ಚು.

– ಡಾ.ನೆ.ಶ್ರೀ ವಿಶ್ವಪತಿಶಾಸ್ತ್ರಿ, ಜ್ಯೋತಿಷಿ

Facebook Comments

Sri Raghav

Admin