ಟ್ವೀಟ್ ಬಾಂಬ್ ಹಾಕಿದ ಮೊಯ್ಲಿ ಬದಲು ರೀಟ್ವೀಟ್ ಮಾಡಿದ ಮಗ ಹರ್ಷಗೆ ಕೆಪಿಸಿಸಿ ನೋಟೀಸ್ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Veerappa-Moily--01

ಬೆಂಗಳೂರು, ಮಾ. 18 : ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಸೃಷ್ಟಿಸಿದ್ದ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಟ್ವೀಟ್ ಬಾಂಬ್ ಕುರಿತಂತೆ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿಗೆ ಕಾಂಗ್ರೆಸ್ ನೋಟಿಸ್ ನೀಡಿದೆ.  ಹಾಯ್ ಕಮಾಂಡ್ ಸೂಚನೆಯಂತೆ ನಿನ್ನೆ ಹರ್ಷ ಮೊಯ್ಲಿಗೆ ನೋಟಿಸ್ ಕೆಪಿಸಿಸಿ ನೀಡಿದೆ. ಆದರೆ, ಟ್ವೀಟ್ ಬಾಂಬ್ ಸಿಡಿಸಿದ್ದ ವೀರಪ್ಪ ಮೊಯ್ಲಿ ಅವರಿಗೆ ವಿವರಣೆ ಕೇಳಿ ಯಾವುದೇ ನೋಟಿಸ್ ನೀಡಿಲ್ಲ. ಮೊನ್ನೆಯಷ್ಟೇ ಹರ್ಷ ಮೊಯ್ಲಿ ಅವರು ಮಾಡಿದ್ದ ಟ್ವೀಟ್ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಚುನಾವಣೆ ಹೊಸ್ತಿಲಲ್ಲಿ ಇರುವಾಗ ಈ ಟ್ವೀಟ್ ಪಕ್ಷಕ್ಕೆ ಭಾರೀ ಮುಜುಗರ ತಂದಿತ್ತು. ಪ್ರತಿಪಕ್ಷಗಳಿಗೆ ಟೀಕಿಸಲು ಹೊಸ ಅಸ್ತ್ರ ಸಿಕ್ಕಂತಾಗಿತ್ತು.

‘ಹಣದ ರಾಜಕೀಯಕ್ಕೆ ಕಾಂಗ್ರೆಸ್ ಅಂತ್ಯ ಹಾಡಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ರಾಜ್ಯದ ಲೋಕೋಪಯೋಗಿ ಸಚಿವ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ನಿರ್ಧರಿಸಲಾಗದು’ ಎಂದು ವೀರಪ್ಪ ಮೊಯ್ಲಿ ಅವರ ಖಾತೆಯಿಂದ ಟ್ವಿಟ್ ಮಾಡಿದ್ದರು. ಆ ಟ್ವೀಟ್ ನ್ನು ಅವರ ಮಗ ಹರ್ಷ ರೀ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಕಷ್ಟು ವಿವಾದ ಉಂಟು ಮಾಡಿದ ಬಳಿಕ ಮೊಯ್ಲಿ ಅವರ ಖಾತೆಯಿಂದ ಅದನ್ನು ಡಿಲೀಟ್ ಮಾಡಲಾಗಿತ್ತು.

Facebook Comments

Sri Raghav

Admin